ಲಂಡನ್: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಬಗ್ಗೆ ಅವರೇ ಟ್ವೀಟ್ ಮಾಡಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಕೊರೊನಾ ಸೋಂಕಿನ ಕೆಲವು ಲಕ್ಷಣಗಳು ನನ್ನಲ್ಲಿ ಕಂಡು ಬಂದಿದ್ದವು. ಪರೀಕ್ಷಿಸಿದಾಗ ಸೋಂಕು ಇರುವುದು ದೃಢಪಟ್ಟಿದೆ. ನಾನೀಗ ಸ್ವಯಂ ಐಸೋಲೇಷನ್‌ನಲ್ಲಿದ್ದು , ಸರ್ಕಾರದ ಕಾರ್ಯಗಳನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ನಿರ್ವಹಿಸುವೆ. ನಾವೆಲ್ಲರೂ ಜತೆಯಾಗಿ ಇದನ್ನು ಪರಾಭವಗೊಳಿಸೋಣ ಎಂದು ಅವರು ವಿಡಿಯೊ ಟ್ವೀಟಿಸಿದ್ದಾರೆ.

ಸೋಂಕಿನ ಕೆಲವು ಲಕ್ಷಣಗಳು ನಿನ್ನೆ ಕಾಣಿಸಿಕೊಂಡಿದ್ದರಿಂದ ಇಂಗ್ಲೆಂಡ್‌ನ ಮುಖ್ಯ ವೈದ್ಯಕೀಯ ಅಧಿಕಾರಿ, ಪ್ರೊಫೆಸರ್ಕ್ರಿಸ್ ವಿಟ್ಟಿ ಅವರ ಸಲಹೆಯಂತೆ ಕೊರೊನಾ ಸೋಂಕು ಪರೀಕ್ಷೆಗೊಳಪಟ್ಟಿದ್ದರು. ಪರೀಕ್ಷೆಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ .ಸಲಹೆ ಸೂಚನೆಗಳ ಮೇರೆಗೆ ಪ್ರಧಾನಿ ಡೌನಿಂಗ್ ಸ್ಟ್ರೀಟ್‌ನಲ್ಲಿ ಸೆಲ್ಫ್ ಐಸೋಲೇಷನ್‌ನಲ್ಲಿರಲಿದ್ದಾರೆ. ಸರ್ಕಾರದ ಕಾರ್ಯವನ್ನು ಅವರು ಮುನ್ನಡೆಸಲಿದ್ದಾರೆ ಎಂದು ಡೌನಿಂಗ್ ಸ್ಟ್ರೀಟ್ ವಕ್ತಾರ ಹೇಳಿರುವುದಾಗಿ 'ದಿ ಗಾರ್ಡಿಯನ್' ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.