ಸೋಫಿಯಾ (ಬಲ್ಗೇರಿಯಾ):  2026ರ ಮೊದಲ ದಿನವೇ ಬಲ್ಗೇರಿಯಾ ‘ಯೂರೋ’ವನ್ನು ತನ್ನ ಅಧಿಕೃತ ಕರೆನ್ಸಿಯಾಗಿ ಅಳವಡಿಸಿಕೊಂಡಿದೆ. ಐರೋಪ್ಯ ಒಕ್ಕೂಟವನ್ನು ಸೇರಿದ 19 ವರ್ಷಗಳ ನಂತರ ‘ಯೂರೋವಲಯ’ದ 21ನೇ ಸದಸ್ಯನಾಗಿ ಅದು ಹೊರಹೊಮ್ಮಿದೆ.

ಜನವರಿ ಅಂತ್ಯದವರೆಗೆ ‘ಯೂರೋ’ ಮತ್ತು ‘ಲೆವ್’ (ಬಲ್ಗೇರಿಯಾದ ಹಾಲಿ ಅಧಿಕೃತ ಕರೆನ್ಸಿ) ಎರಡರಲ್ಲೂ ಜನರು ವ್ಯವಹರಿಸಬಹುದಾಗಿದೆ. ಫೆಬ್ರುವರಿ 1ರಿಂದ ಯುರೋ ಬಲ್ಗೇರಿಯಾದ ಅಧಿಕೃತ ಬಳಕೆಯ ಕರೆನ್ಸಿ ಎನಿಸಿಕೊಳ್ಳಲಿದೆ. 2026ರ ಆಗಸ್ಟ್ 8ರವರೆಗೆ ಎರಡೂ ಕರೆನ್ಸಿಗಳಲ್ಲಿ ದರ ಪ್ರಕಟಿಸಲಾಗುತ್ತದೆ. ವ್ಯಾಪಾರಿಗಳು ಯಾವ ಕರೆನ್ಸಿಯಲ್ಲಿ ಬೇಕಿದ್ದರೂ ವ್ಯವಹರಿಸುವ ಆಯ್ಕೆ ಹೊಂದಿರುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2026 ವರ್ಷಪೂರ್ತಿ ಜನರು ವಾಣಿಜ್ಯ ಬ್ಯಾಂಕ್ಗಳಲ್ಲಿ ಲೆವ್ ಕರೆನ್ಸಿಯನ್ನು ಯೂರೊಗೆ ಪರಿವರ್ತಿಸಿಕೊಳ್ಳಬಹುದು. ಆರು ತಿಂಗಳವರೆಗೆ ಶುಲ್ಕ ಇರುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.