ಬೆಂಗಳೂರು: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಈ ಮೂಲಕ ಟ್ರುಡೊ ತಮ್ಮ ಪಕ್ಷ ಲೀಬರಲ್ ಪಾರ್ಟಿಯ ನಾಯಕ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಬುಧವಾರ ಒಟ್ಟಾವೊದಲ್ಲಿ ಲಿಬರಲ್ ಪಕ್ಷದ ಕಾಕಸ್ ಸಮಿತಿ ಸಭೆ ನಡೆಯಲಿದೆ. ಇದಕ್ಕೂ ಮೊದಲೇ ಅವರು ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಹಲವು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಕಳೆದ ಒಂದು ತಿಂಗಳಿನಿಂದ ಟ್ರುಡೊ ಅವರ ನಾಯಕತ್ವಕ್ಕೆ ಅವರ ಪಕ್ಷದ ಸಂಸದರಿಂದಲೇ ಅಪಸ್ವರ ವ್ಯಕ್ತವಾಗಿದೆ. ಹಣಕಾಸು ಸಚಿವೆ ಕ್ರಿಸ್ಟಿನಾ ಫ್ರಿಲ್ಯಾಂಡ್ ಅವರು ಸ್ಥಾನ ತ್ಯಜಿಸಿದ್ದರು. ಇದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು.

ಖಾಲಿಸ್ತಾನ್ ಉಗ್ರರ ವಿಚಾರದಲ್ಲಿ ಇಲ್ಲಸಲ್ಲದ್ದನ್ನು ಮಾತನಾಡಿ ಭಾರತದ ಕೆಂಗಣ್ಣಿಗೂ ಜಸ್ಟಿನ್ ಟ್ರುಡೋ ಗುರಿಯಾಗಿದ್ದರು.

ಹೌಸ್ ಆಫ್ ಕಾಮನ್ಸ್ನಲ್ಲಿ ಲಿಬರಲ್ ಪಕ್ಷದ 153 ಸಂಸದರಿದ್ದಾರೆ. ಜಸ್ಟಿನ್ ವಿರುದ್ಧ 20 ಕ್ಕೂ ಹೆಚ್ಚು ಸಂಸದರು ಧ್ವನಿ ಎತ್ತಿದ್ದಾರೆ. ಇದರಿಂದ ಸಂಭವನೀಯ ಮುಜುಗರ ತಪ್ಪಿಸಿಕೊಳ್ಳಲು ಟ್ರುಡೋ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಈ ಕುರಿತು ಬ್ಲೂಮ್ಬರ್ಗ್ ವರದಿ ಆಧರಿಸಿ ಎನ್ಡಿಟಿವಿ ವರದಿ ಮಾಡಿದೆ.

ಟ್ರುಡೊ ರಾಜೀನಾಮೆ ನೀಡಿದರೆ ಕೆನಡಾದಲ್ಲಿ ಅವಧಿಗೆ ಮುನ್ನವೇ ಚುನಾವಣೆ ನಡೆಯಲಿದೆ. ನಿಗದಿತ ವೇಳಾಪಟ್ಟಿಯಂತೆ ಸಾರ್ವತ್ರಿಕ ಚುನಾವಣೆ ಮುಂದಿನ ವರ್ಷ ಅಕ್ಟೋಬರ್ನಲ್ಲಿ ನಡೆಯಬೇಕು.
.ಅವಿಶ್ವಾಸ ನಿರ್ಣಯ ಮಂಡಿಸಲು ಮಿತ್ರ ಪಕ್ಷ ನಿರ್ಧಾರ ಟ್ರುಡೊ ಸರ್ಕಾರಕ್ಕೆ ಸಂಕಷ್ಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.