ಎನ್ಜಮೀನ (ಚಾಡ್): ತಮ್ಮ ದೇಶವು ಅಮೆರಿಕದ ಪ್ರಜೆಗಳಿಗೆ ವೀಸಾ ನೀಡುವುದನ್ನು ನಿಲ್ಲಿಸಿದೆ ಎಂದು ಚಾಡ್ ಅಧ್ಯಕ್ಷ ಮಹಮದ್ ಇದ್ರಿಸ್ ಡೆಬಿ ಅವರು ಘೋಷಿಸಿದ್ದಾರೆ.

ಚಾಡ್ನ ನಾಗರಿಕರು ಅಮೆರಿಕಕ್ಕೆ ಭೇಟಿ ನೀಡುವುದನ್ನು ನಿಷೇಧಿಸುವ ಡೊನಾಲ್ಡ್ ಟ್ರಂಪ್ ಆಡಳಿತದ ನಿರ್ಧಾರಕ್ಕೆ ಪ್ರತಿಕ್ರಿಯೆಯಾಗಿ, ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

‘ಕ್ರಿಯೆಗೆ ತಕ್ಕ ಪ್ರತಿಕ್ರಿಯೆಯಾಗಿ ಅಮೆರಿಕದ ನಾಗರಿಕರಿಗೆ ವೀಸಾ ನೀಡುವುದನ್ನು ಸ್ಥಗಿತಗೊಳಿಸುವಂತೆ ನಮ್ಮ ಸರ್ಕಾರಕ್ಕೆ ನಿರ್ದೇಶನ ನೀಡಿದ್ದೇನೆ’ ಎಂದು ಚಾಡ್ ಅಧ್ಯಕ್ಷರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ಧಾರೆ.

‘ಅಮೆರಿಕಕ್ಕೆ ನೀಡಲು ಚಾಡ್ ಬಳಿ ವಿಮಾನ ಅಥವಾ ಶತಕೋಟಿ ಡಾಲರ್ಗಳಿಲ್ಲ. ಆದರೆ, ಚಾಡ್ಗೆ ತನ್ನದೇ ಆದ ಘನತೆ ಇದೆ’ ಎಂದು ಡೆಬಿ ಹೇಳಿದ್ದಾರೆ. ಟ್ರಂಪ್ ಅವರಿಗೆ ಕತಾರ್ ಐಷಾರಾಮಿ ವಿಮಾನವನ್ನು ಉಡುಗೊರೆಯಾಗಿ ನೀಡಿರುವುದನ್ನು ಉಲ್ಲೇಖಿಸಿ ಅವರು ಹೀಗೆ ಹೇಳಿದ್ದಾರೆ.

ಸೋಮವಾರದಿಂದ ಜಾರಿ (ವಾಷಿಂಗ್ಟನ್ ವರದಿ): ಪ್ರಯಾಣ ನಿಷೇಧಕ್ಕೆ ಸಂಬಂಧಿಸಿದ ಹೊಸ ನಿಯಮವನ್ನು ಅಮೆರಿಕ ಸೋಮವಾರದಿಂದ ಜಾರಿಗೊಳಿಸಿದೆ. ಪ್ರಯಾಣ ನಿಷೇಧ ಪಟ್ಟಿಗೆ 12 ಹೊಸ ದೇಶಗಳನ್ನು ಸೇರಿಸುವ ನಿಯಮಕ್ಕೆ ಟ್ರಂಪ್ ಅವರು ಬುಧವಾರ ಸಹಿ ಹಾಕಿದ್ದರು.

ಅಫ್ಗಾನಿಸ್ತಾನ, ಮ್ಯಾನ್ಮಾರ್, ಚಾಡ್, ಕಾಂಗೊ ಗಣರಾಜ್ಯ, ಈಕ್ವಟೋರಿಯಲ್ ಗಿನಿ, ಎರಿಟ್ರಿಯಾ, ಹೈಟಿ, ಇರಾನ್, ಲಿಬಿಯಾ, ಸೊಮಾಲಿಯಾ, ಸುಡಾನ್ ಮತ್ತು ಯೆಮನ್ ದೇಶಗಳ ನಾಗರಿಕರು ಅಮೆರಿಕ ಪ್ರವೇಶಿಸುವುದರ ಮೇಲೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.