ಮ್ಯಾಡ್ರಿಡ್: ಲಿವರ್ಪೂಲ್ ತಾರೆ, ಪೋರ್ಚುಗಲ್ ಫುಟ್ಬಾಲ್ ತಂಡದ ಫಾರ್ವರ್ಡ್ ಆಟಗಾರ ಡಿಯಾಗೊ ಜೋಟಾ (28) ಮತ್ತು ಅವರ ಸೋದರ ಆ್ಯಂಡ್ರೆ ಸಿಲ್ವಾ (25) ಅವರು ಬುಧವಾರ ತಡರಾತ್ರಿ ಕಾರು ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಅವರ ಸಾವಿಗೆ ಫುಟ್ಬಾಲ್ ವಲಯದಲ್ಲಿ ತೀವ್ರ ಶೋಕ ವ್ಯಕ್ತವಾಗಿದೆ.

ಸ್ಪೇನ್ನ ವಾಯುವ್ಯ ಭಾಗದ ಝಮೋರಾ ನಗರದ ಸೆರ್ನಾಡಿಲಾ ಎಂಬಲ್ಲಿ ಅವರಿದ್ದ ಲ್ಯಾಂಬೋರ್ಗಿನಿ ಸೂಪರ್ ಕಾರು ನಿಯಂತ್ರಣ ತಪ್ಪಿ ಹೆದ್ದಾರಿಯಿಂದ ಬದಿಗೆ ಸರಿದು ಬೆಂಕಿಗೆ ಆಹುತಿಯಾಗಿದೆ. ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಇಬ್ಬರಲ್ಲಿ ಕಾರು ಚಲಾಯಿಸುತ್ತಿದ್ದವರು ಯಾರೆಂದು ತಿಳಿದುಬಂದಿಲ್ಲ. ಇನ್ನೊಂದು ವಾಹನವನ್ನು ಓವರ್ಟೇಕ್ ಮಾಡುವ ವೇಳೆ ಟೈರ್ ಸಿಡಿದಿರಬಹುದು ಎಂದು ಪೊಲೀಸರು ಪ್ರಾಥಮಿಕ ತನಿಖೆಯ ನಂತರ ಶಂಕಿಸಿದ್ದಾರೆ.

ಕಳೆದ ತಿಂಗಳಷ್ಟೇ (ಜೂನ್ 22) ಜೋಟಾ ಅವರ ವಿವಾಹ ನಡೆದಿತ್ತು. ಜೋಟಾ (ಪೂರ್ಣ ಹೆಸರು ಡಿಯಾಗೊ ಜೋಸ್ ಟಿಕ್ಸೀರಾ ಡ ಸಿಲ್ವಾ) ಮತ್ತು ಸಿಲ್ವಾ ಇಬ್ಬರೂ ಪೋರ್ಚುಗಲ್ ತಂಡದ ಆಟಗಾರರು.

‘ಬೆಂಕಿಯಿಂದ ಕರಕಲಾದ ಕಾರಿನ ಅವಶೇಷಗಳ ವಿಡಿಯೊ ಕ್ಲಿಪ್ಗಳನ್ನು ಸ್ಥಳೀಯ ಮಾಧ್ಯಮಗಳು ಪ್ರಕಟಿಸಿವೆ. ಪಕ್ಕದ ಕುರುಚಲು ಕಾಡಿಗೆ ಬೆಂಕಿ ವ್ಯಾಪಿಸಿತು. ಅಗ್ನಿಶಾಮಕ ವಾಹನಗಳು ಧಾವಿಸಿದವು.

ಪೋರ್ಚುಗಲ್ ತಂಡದ ಸೂಪರ್ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಅವರು ‘ಎಕ್ಸ್’ನಲ್ಲಿ ಸಂತಾಪ ಸೂಚಿಸಿದ್ದು, ‘ನಿಮ್ಮ ಸಾವು ನಮ್ಮನ್ನು ಕಾಡಲಿದೆ’ ಎಂದು ಬರೆದಿದ್ದಾರೆ.

ರೂತ್ ಕಾರ್ಡೊಸೊ ಅವರನ್ನು ಎರಡು ವಾರ ಹಿಂದೆ ವಿವಾಹವಾಗಿದ್ದ ಜೋಟಾ ಅವರಿಗೆ ಮೂವರು ಮಕ್ಕಳಿದ್ದಾರೆ.

ಕಳೆದ ತಿಂಗಳು ಪೋರ್ಚುಗಲ್ಗೆ ಆಡಿದ್ದ ಜೋಟಾ ಅವರು ತಂಡವು ನೇಷನ್ಸ್ ಲೀಗ್ ಗೆಲ್ಲಲು ನೆರವಾಗಿದ್ದರು.

‘ಜೋಟಾ ಅವರ ದುರಂತ ಸಾವಿನಿಂದ ಆಘಾತವಾಗಿದೆ’ ಎಂದು ಲಿವರ್ಪೂಲ್ ಕ್ಲಬ್ ತಿಳಿಸಿದೆ. ಅವರು 2020ರಲ್ಲಿ ವೋಲ್ವ್ಸ್ ಕ್ಲಬ್ನಿಂದ ಲಿವರ್ಪೂಲ್ಗೆ ಸೇರ್ಪಡೆಯಗಿದ್ದರು.

ಪೋರ್ಚುಗೀಸ್ ಫುಟ್ಬಾಲ್ ಫೆಡರೇಷನ್ ಕೂಡ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಇಬ್ಬರು ಆಟಗಾರರ ಸಾವಿಗೆ ಆಘಾತ ಸೂಚಿಸಿದೆ. ಪೋರ್ಚುಗಲ್ ತಂಡದ ಪರ 50ಕ್ಕೂ ಹೆಚ್ಚು ಪಂದ್ಯಗಳನ್ನು ಅವರು ಆಡಿದ್ದಾರೆ. ‘ಅವರನ್ನು ತಂಡದ ಸಹೋದ್ಯೋಗಿಗಳು, ಎದುರಾಳಿ ಆಟಗಾರರೂ ಗೌರವಿಸುತ್ತಿದ್ದರು. ನಾವು ಇಬ್ಬರು ಚಾಂಪಿಯನ್ನರನ್ನು ಕಳೆದುಕೊಂಡಿದ್ದೇವೆ’ ಎಂದು ಫೆಡರೇಷನ್ ಅಧ್ಯಕ್ಷ ಪೆಡ್ರೊ ಪೊಯನ್ಕಾ ತಿಳಿಸಿದ್ದಾರೆ.

ಮಹಿಳಾ ಯುರೋಪಿಯನ್ ಚಾಂಪಿಯನ್ಷಿಪ್ನಲ್ಲಿ ಪೋರ್ಚುಗಲ್– ಸ್ಪೇನ್ ನಡುವಣ ಗುರುವಾರ ನಡೆದ ಪಂದ್ಯಕ್ಕೆ ಅವರ ಗೌರವಾರ್ಥ ಒಂದು ನಿಮಿಷ ಮೊದಲು ಮೌನ ಆಚರಿಸಲಾಯಿತು.

‘ಜೋಟಾ ಸಾವಿನ ಸುದ್ದಿಯಿಂದ ತೀವ್ರ ಆಘಾತಗೊಂಡಿದ್ದೇನೆ’ ಎಂದು ಲಿವರ್ಪೂಲ್ ಮ್ಯಾನೇಜರ್ ಯಾರ್ಗನ್ ಕ್ಲಾಪ್ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.