ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ನಂತರ ಹೆಚ್ಚಲಿದೆ ಮಕ್ಕಳ ಕಳ್ಳಸಾಗಣೆ, ಅಸುರಕ್ಷಿತ ವಲಸೆ

ಮಕ್ಕಳ ಹಕ್ಕುಗಳ ನೀತಿ ಸಂಶೋಧನೆ ಮತ್ತು ರಕ್ಷಣಾ ಸಂಸ್ಥೆ ಎಚ್ಚರಿಕೆ
Last Updated 31 ಜುಲೈ 2020, 9:39 IST
ಅಕ್ಷರ ಗಾತ್ರ

ನವದೆಹಲಿ: ಲಾಕ್‌ಡೌನ್ ನಂತರದ ಅವಧಿಯಲ್ಲಿ ಅಪಾರ ಪ್ರಮಾಣದ ಅಸುರಕ್ಷಿತ ವಲಸೆ ಮತ್ತು ಮಕ್ಕಳ ಕಳ್ಳಸಾಗಣೆ ನಡೆಯಬಹುದು ಎಂದು ಮಕ್ಕಳ ಹಕ್ಕು ರಕ್ಷಣಾ ಸಂಸ್ಥೆ ಗುರುವಾರ ಎಚ್ಚರಿಕೆ ನೀಡಿದೆ.

'ಮಕ್ಕಳ ಕಳ್ಳಸಾಗಣೆ ಬಗ್ಗೆ ಈ ಹಿಂದಿನ ದತ್ತಾಂಶಗಳಿಂದ ತಿಳಿದುಕೊಳ್ಳಬಹುದು. ಕೊರೊನಾ ಸಾಂಕ್ರಾಮಿಕವು ಸಂಭವಿಸುವುದಕ್ಕೂ ಮೊದಲೇ ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ನಾವು ದುರ್ಬಲರಾಗಿದ್ದೆವು. ಕೊರೊನಾ ಹಿನ್ನೆಲೆಯಲ್ಲಿ ಹೇರಲಾಗಿರುವ ಲಾಕ್‌ಡೌನ್‌ನಿಂದ ಜನರು ಆರ್ಥಿಕವಾಗಿ ಸಂಕಷ್ಟಕ್ಕೀಡಾದ್ದಾರೆ. ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ಸಮುದಾಯಗಳ ಮಕ್ಕಳ ಕಳ್ಳಸಾಗಣೆಯಲ್ಲಿ ತೀವ್ರ ಹೆಚ್ಚಳ ಕಾಣಬಹುದು' ಎಂದು ಮಕ್ಕಳ ಹಕ್ಕು ನೀತಿ ಸಂಶೋಧನೆ ಮತ್ತು ರಕ್ಷಣಾ ಸಂಸ್ಥೆಯ ನಿರ್ದೇಶಕಿ ಪ್ರೀತಿ ಮೆಹ್ರಾ ಹೇಳಿದ್ದಾರೆ.

ಎಬೋಲಾ ವೈರಸ್‌, ಪ್ರವಾಹ ಮತ್ತು ಭೂಕಂಪಗಳಂತಹ ಅನಾಹುತಗಳು ಸಂಭವಿಸಿದಾಗ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಮುಗ್ಗಟ್ಟು ಉಂಟಾಗುತ್ತದೆ. ಇಂತಹ ಬಿಕ್ಕಟ್ಟುಗಳಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ಸಮೂದಾಯಗಳು ಹೆಚ್ಚಿನ ತೊಂದರೆ ಅನುಭವಿಸುತ್ತವೆ. ಇದು ಅಸುರಕ್ಷಿತ ವಲಸೆ ಮತ್ತು ಮಕ್ಕಳ ಕಳ್ಳಸಾಗಣೆ ಪ್ರಕರಣಗಳಿಗೆ ಕಾರಣವಾಗುತ್ತದೆ. ಹಿಂದಿನ ದುರಂತಗಳ ನಂತರದ ಬೆಳವಣಿಗಳನ್ನು ಗಮನಿಸಿದಾಗ ಈ ಅಂಶ ತಿಳಿದುಬರುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಲೈಂಗಿಕ ಶೋಷಣೆ, ಬಲವಂತದ ವಿವಾಹ ಮತ್ತು ಒತ್ತಾಯದಿಂದ ಕಾರ್ಮಿಕರನ್ನಾಗಿ ಮಾಡುವ ಉದ್ದೇಶಗಳಿಂದ ಮಾನವ ಕಳ್ಳಸಾಗಣೆ ಅಧಿಕವಾಗಿ ನಡೆಯುತ್ತದೆಂದು ಪ್ರೀತಿ ಮೆಹ್ರಾ ತಿಳಿಸಿದ್ದಾರೆ.

ಈ ವರ್ಷ ದೇಶದಲ್ಲಿ ಕೊರೊನಾ ಸಾಂಕ್ರಾಮಿಕ, ಮಿಡತೆ ದಾಳಿ, ಪ್ರವಾಹ, ಚಂಡಮಾರುತಗಳಂತ ನೈಸರ್ಗಿಕ ವಿಕೋಪಗಳು ಘಟಿಸಿವೆ. ಇದು ಬಡತನ ಹೆಚ್ಚಳಕ್ಕೆ ಕಾರಣವಾಗಿದೆ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT