ಹ್ಯೂಸ್ಟನ್: ಕೊರೊನಾ ಸೋಂಕಿತ ಹಿರಿಯರಿಗೆ ಹೋಲಿಸಿದರೆ ಮಕ್ಕಳು ಗುಣಮುಖರಾಗುವ ಪ್ರಮಾಣ ಹೆಚ್ಚಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಕೊರೊನಾ ಸೋಂಕು ಹರಡುವಿಕೆ ತೀವ್ರಗೊಂಡ ಮೊದಲ ನಾಲ್ಕು ತಿಂಗಳ ಸಂಶೋಧನೆಗಳನ್ನಾಧರಿಸಿ ಅಧ್ಯಯನ ನಡೆಸಲಾಗಿದೆ.

ಅಮೆರಿಕದ ಟೆಕ್ಸಾಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ. ಇದಕ್ಕೆ 7,500ಕ್ಕೂ ಹೆಚ್ಚು ಕೊರೊನಾ ಸೋಂಕಿತ ವ್ಯಕ್ತಿಗಳ ವೈದ್ಯಕೀಯ ದತ್ತಾಂಶಗಳನ್ನು ಬಳಸಿಕೊಳ್ಳಲಾಗಿದೆ. ಈ ಅಧ್ಯಯನ ವರದಿಯು ಲ್ಯಾನ್ಸೆಟ್‌ನ ಇ–ಕ್ಲಿನಿಕಲ್ ಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟವಾಗಿದೆ.

ಇದನ್ನೂ ಓದಿ:ಸೋಂಕಿತರ ಮೇಲೆ ಕೊರೊನಾ ಪರಿಣಾಮ: ಈವರೆಗೆ ವೈದ್ಯರು ಕಂಡುಕೊಂಡಿದ್ದೇನು?

ಕೋವಿಡ್ ಪೀಡಿತ ಮಕ್ಕಳ ಪೈಕಿ ಐದನೇ ಒಂದರಷ್ಟು ಮಂದಿಯಲ್ಲಿ ರೋಗಲಕ್ಷಣಗಳು ಕಂಡುಬಂದಿರಲಿಲ್ಲ. ಶೇ 21ರಷ್ಟು ಮಕ್ಕಳ ಶ್ವಾಸಕೋಶದ ಅಂಗಾಂಶಗಳಲ್ಲಿ ಗಾಯಗಳಾಗಿರುವುದು ಎಕ್ಸ್–ರೇಯಿಂದ ತಿಳಿದುಬಂದಿದೆ ಎಂದು ವರದಿ ಉಲ್ಲೇಖಿಸಿದೆ.

ಕೊರೊನಾ ಸೋಂಕಿತ ಶೇ 5.6ರಷ್ಟು ಮಕ್ಕಳಲ್ಲಿ ಫ್ಲುನಂತಹ ಲಕ್ಷಣಗಳು ಕಾಣಿಸಿಕೊಂಡಿತ್ತು. ಶೇ 3ಕ್ಕಿಂತ ಹೆಚ್ಚು ಮಕ್ಕಳನ್ನು ತೀವ್ರ ನಿಗಾ ಘಟಕಗಳಲ್ಲಿ ದಾಖಲು ಮಾಡಬೇಕಾಗಿ ಬಂದಿತ್ತು. ಏಳು ಸಾವು ವರದಿಯಾಗಿತ್ತು ಎಂದು ಉಲ್ಲೇಖಿಸಲಾಗಿದೆ.

‘131 ಅಧ್ಯಯನಗಳಿಂದ ದತ್ತಾಂಶಗಳನ್ನು ಪರಿಗಣಿಸಲಾಗಿದೆ. ಇದರಲ್ಲಿ 7,780ರಷ್ಟು ಸೋಂಕಿತರು ಮಕ್ಕಳಾಗಿದ್ದರು’ ಎಂದು ಅಧ್ಯಯನ ವರದಿಯ ಲೇಖಕ ಅಲ್ವಾರೊ ಮೊರೆರಾ ತಿಳಿಸಿದ್ದಾರೆ.

ಇದನ್ನೂ ಓದಿ:ಕೊರೊನಾ ಸೋಂಕಿತರಿಗೆ ಪಾರ್ಶ್ವವಾಯು ಅಪಾಯ ಹೆಚ್ಚು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.