ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ಷಣಾ ಮೂಲಸೌಕರ್ಯ ಅಭಿವೃದ್ಧಿ: ಪಾಕಿಸ್ತಾನಕ್ಕೆ ಚೀನಾ ನೆರವು

Published 25 ಜೂನ್ 2023, 13:34 IST
Last Updated 25 ಜೂನ್ 2023, 13:34 IST
ಅಕ್ಷರ ಗಾತ್ರ

ನವದೆಹಲಿ: ಗಡಿನಿಯಂತ್ರಣ ರೇಖೆಯುದ್ದಕ್ಕೂ ರಕ್ಷಣಾ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಪಾಕಿಸ್ತಾನಕ್ಕೆ ಚೀನಾವು ಸಹಾಯ ಮಾಡುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಚೀನಾವು ಪಾಕಿಸ್ತಾನಕ್ಕೆ ಮಾನವರಹಿತ ವೈಮಾನಿಕ ವಾಹನಗಳನ್ನು ಒದಗಿಸುತ್ತಿದೆ ಮತ್ತು ಸಂವಹನ ಗೋಪುರಗಳನ್ನು ಹಾಗೂ ಭೂಗತ ಕೇಬಲ್‌ಗಳನ್ನು ಸ್ಥಾಪಿಸಲು ನೆರವಾಗುತ್ತಿದೆ ಎಂದಿದ್ದಾರೆ.

ಚೀನಾ - ಪಾಕಿಸ್ತಾನ ಆರ್ಥಿಕ ಕಾರಿಡಾರ್‌ (ಸಿಪಿಇಸಿ) ಮತ್ತು ಜಲವಿದ್ಯುತ್‌ ಯೋಜನೆಗಾಗಿ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಚೀನಾವು ತನ್ನ ಪ್ರಭಾವವನ್ನು ಹೆಚ್ಚಿಸುತ್ತಿದೆ ಎಂದೂ ವಿವರಿಸಿದ್ದಾರೆ.

ಟ್ರಕ್‌ ಮೇಲೆ ಅಳವಡಿಸಬಹುದಾದ ಎಸ್‌ಎಚ್‌–15 ಹೊವಿಟ್ಜರ್ ಗನ್ ಅನ್ನು ಎಲ್‌ಒಸಿ ಬಳಿ ಪಾಕಿಸ್ತಾನ ಸ್ಥಾಪಿಸಿದ್ದು, ‌ ಇವುಗಳ ಖರೀದಿಗಾಗಿ ಚೀನಾದ ಕಂಪನಿಯ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT