ಶಾಂಘೈ: ಚೀನಾ ಸ್ಥಾಪಿಸಿರುವ ವಿಶ್ವದ ಬೃಹತ್ ರೇಡಿಯೊ ದೂರದರ್ಶಕ ಅಧಿಕೃತವಾಗಿ ಶನಿವಾರ ಕಾರ್ಯಾಚರಣೆ ಆರಂಭಿಸಿದೆ. ಈ ದೂರದರ್ಶಕದ ವಿಸ್ತೀರ್ಣ 30 ಪುಟ್‌ಬಾಲ್ ಮೈದಾನಗಳಷ್ಟಿದೆ. ಇದನ್ನು ‘ಸ್ಕೈ ಐ’ಎಂದೂ ಕರೆಯಲಾಗುತ್ತದೆ.

‘ಬಾಹ್ಯಾಕಾಶ ಸಂಶೋಧನೆಗೆ ಈ ದೂರದರ್ಶಕ ಬಳಕೆಯಾಗಲಿದೆ. ಜತೆಗೆ ಅನ್ಯಗ್ರಹಗಳಲ್ಲಿ ಜೀವಿಗಳಿವೆಯೆ ಎಂದು ಪತ್ತೆ ಮಾಡಲೂ ಇದು ಸಹಕಾರಿಯಾಗಲಿದೆ’ ಎಂದು ಸರ್ಕಾರಿ ಸುದ್ದಿಸಂಸ್ಥೆ ಕ್ಸಿನುವಾ ವರದಿ ಮಾಡಿದೆ.

‘2016ರಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕ, ಈವರೆಗೂ ಸಾಕಷ್ಟು ಪರೀಕ್ಷೆಗಳಿಗೆ ಒಳಪಟ್ಟಿದೆ. ಕಾರ್ಯಾಚರಣೆ ಆರಂಭಿಸಲು ಸರ್ಕಾರದ ಅನುಮತಿ ದೊರೆತಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.