ಬೀಜಿಂಗ್/ಲಂಡನ್: ಮುಕ್ತ ವ್ಯಾಪಾರದ ಬೆಂಬಲಿಗರಾಗಿ ಉಭಯ ದೇಶಗಳು ಜಂಟಿಯಾಗಿ ಬಹುಪಕ್ಷೀಯತೆಯನ್ನು ಪ್ರತಿಪಾದಿಸಬೇಕು ಮತ್ತು ಅನುಸರಿಸಬೇಕು ಎಂದು ಚೀನಾದ ಅಧ್ಯಕ್ಷ ಷಿ ಜಿನ್ಪಿಂಗ್ ಅವರು ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಅವರಿಗೆ ಗುರುವಾರ ತಿಳಿಸಿದರು.

ಎಂಟು ವರ್ಷಗಳಲ್ಲಿ ಚೀನಾಕ್ಕೆ ಭೇಟಿ ನೀಡಿದ ಮೊದಲ ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಅವರೊಂದಿಗೆ ಜಿನ್ಪಿಂಗ್ ಅವರು ಬೀಜಿಂಗ್ನ ‘ಗ್ರೇಟ್ ಹಾಲ್ ಆಫ್ ದ ಪೀಪಲ್’ನಲ್ಲಿ ಸಭೆ ನಡೆಸಿದರು.

‘ಎಲ್ಲ ದೇಶಗಳು ಪಾಲಿಸಿದರಷ್ಟೆ ಅಂತರರಾಷ್ಟ್ರೀಯ ಕಾನೂನುಗಳು ಪರಿಣಾಮಕಾರಿಯಾಬಲ್ಲವು. ವಿಶೇಷವಾಗಿ ಪ್ರಮುಖ ದೇಶಗಳು ಮುಂದಾಳತ್ವ ವಹಿಸಬೇಕು. ಇಲ್ಲವಾದರೆ, ಜಗತ್ತು ಅರಾಜಕತೆಯತ್ತ ಸಾಗುತ್ತದೆ. ಚೀನಾ ಎಷ್ಟೇ ಬೆಳೆದರೂ ಇತರ ದೇಶಗಳಿಗೆ ಬೆದರಿಕೆ ಒಡ್ಡುವುದಿಲ್ಲ’ ಎಂದು ಜಿನ್ಪಿಂಗ್ ಹೇಳಿದ್ದಾರೆ ಎಂದು ರಾಜ್ಯ ಪ್ರಸಾರಕ ಸುದ್ದಿ ಸಂಸ್ಥೆಯೊಂದು ತಿಳಿಸಿದೆ.

‘ಉಭಯ ದೇಶಗಳಿಗೆ ಪ್ರಯೋಜನವಾಗುವ ಸ್ಥಿರ, ದೀರ್ಘಕಾಲೀನ ಮತ್ತು ಕಾರ್ಯತಂತ್ರದ ಪಾಲುದಾರಿಕೆಯನ್ನು ನಿರ್ಮಿಸುವಲ್ಲಿ ತಮ್ಮ ಬದ್ಧತೆಯ ಕುರಿತು ಇಬ್ಬರು ನಾಯಕರು ದೃಢಪಡಿಸಿದ್ದಾರೆ’ ಎಂದು ಲಂಡನ್ ಪ್ರಧಾನಿಯ ಅಧಿಕೃತ ನಿವಾಸ (ಡೌನಿಂಗ್ ಸ್ಟ್ರೀಟ್) ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸುವುದನ್ನು ಮುಂದುವರಿಸಲು ಮತ್ತು ಭಿನ್ನಾಭಿಪ್ರಾಯ ಹೊಂದಿದ ಕ್ಷೇತ್ರಗಳಲ್ಲಿ ಮುಕ್ತ ಮತ್ತು ಸ್ಪಷ್ಟ ಸಂವಾದ ನಡೆಸುವುದಾಗಿ ಉಭಯ ನಾಯಕರು ಒಪ್ಪಿಕೊಂಡಿದ್ದಾರೆ ಎಂದು ಅದು ತಿಳಿಸಿದೆ.

‘ದೇಶದಲ್ಲಿನ ಬೆಳವಣಿಗೆ ವಿದೇಶದಲ್ಲಿರುವ ವಿಶ್ವದ ಅತಿದೊಡ್ಡ ಶಕ್ತಿಗಳೊಂದಿಗಿನ ನಮ್ಮ ಸಂಬಂಧಕ್ಕೆ ನೇರವಾಗಿ ಸಂಬಂಧಿಸಿದೆ’ ಎಂದು ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ತಿಳಿಸಿದ್ದಾರೆ.

ಬ್ರಿಟನ್–ಚೀನಾ: ಗಡಿ ಭದ್ರತಾ ಒಪ್ಪಂದ

ಲಂಡನ್: ಮಾನವ ಕಳ್ಳಸಾಗಣೆಯನ್ನು ಹತ್ತಿಕ್ಕುವ ಸಲುವಾಗಿ ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಅವರು ಚೀನಾದೊಂದಿಗೆ ಹೊಸ ಗಡಿ ಭದ್ರತಾ ಒಪ್ಪಂದ ಮಾಡಿಕೊಳ್ಳಲಿದ್ದಾರೆ ಎಂದು ಡೌನಿಂಗ್ ಸ್ಟ್ರೀಟ್ ತಿಳಿಸಿದೆ.

ಸ್ಕಾಚ್, ವಿಸ್ಕಿ ರಫ್ತು ಸುಂಕ ಕಡಿತ ಮತ್ತು ಬ್ರಿಟನ್ ಪ್ರವಾಸಿಗರಿಗೆ ಚೀನಾದಲ್ಲಿ ವೀಸಾ–ಮುಕ್ತ ಪ್ರಯಾಣಕ್ಕೆ ಅನುಮತಿಯನ್ನು ನಿರೀಕ್ಷಿಸಲಾಗಿದೆ. ಜೊತೆಗೆ ಕಳ್ಳಸಾಗಣೆ ತಡೆಯಲು ಉಭಯ ದೇಶಗಳು ಈ ಒಪ್ಪಂದಕ್ಕೆ ಮುಂದಾಗಿವೆ.

ಹೊಸ ಗಡಿ ಭದ್ರತಾ ಒಪ್ಪಂದದ ಅನ್ವಯ, ಸಣ್ಣ ದೋಣಿ ಎಂಜಿನ್ಗಳು ಮತ್ತು ಉಪಕರಣಗಳು ಅಪರಾಧ ಎಸಗುವವರ ಕೈಸೇರುವ ಮುನ್ನ ಅದನ್ನು ತಡೆಯಲು ಬ್ರಿಟನ್ ಕಾನೂನು ಜಾರಿ ಸಂಸ್ಥೆಗಳು ಚೀನಾದ ಅಧಿಕಾರಿಗಳೊಂದಿಗೆ ಕೆಲಸ ಮಾಡುವ ನಿರೀಕ್ಷೆಯಿದೆ ಎಂದು ತಿಳಿಸಿದೆ.

ಬ್ರಿಟನ್ನ ಸರ್ಕಾರದ ಅಧಿಕೃತ ಅಂಕಿಅಂಶಗಳ ಪ್ರಕಾರ, ಕಳೆದ ವರ್ಷ ಕಳ್ಳಸಾಗಣೆ ಗ್ಯಾಂಗ್ಗಳು ಬಳಸಿದ ಎಲ್ಲಾ ಎಂಜಿನ್ಗಳಲ್ಲಿ ಶೇ 60ಕ್ಕಿಂತ ಹೆಚ್ಚು ಚೀನಾ ನಿರ್ಮಿತ ಎಂಜಿನ್ ಎಂದು ತಿಳಿದುಬಂದಿದೆ.

ಬ್ರಿಟನ್- ಚೀನಾ ನಡುವೆ ಪಾಲುದಾರಿಕೆ ಒಪ್ಪಂದ

ಬೀಜಿಂಗ್: ಉಭಯ ದೇಶಗಳ ನಡುವೆ ಬಾಂಧವ್ಯ ವೃದ್ಧಿಸಿಕೊಳ್ಳುವ ಸಲುವಾಗಿ ಬ್ರಿಟನ್ ಮತ್ತು ಚೀನಾ ಗುರುವಾರ ‘ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ’ಕ್ಕೆ ಕರೆ ನೀಡಿವೆ. ಬೀಜಿಂಗ್ನಲ್ಲಿ ನಡೆದ ಸಭೆಯಲ್ಲಿ ಜಾಗತಿಕ ಬಿಕ್ಕಟ್ಟು ಮತ್ತು ಅನಿಶ್ಚಿತತೆ ನಡುವೆ ಜಾಗತಿಕ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಚೀನಾ ಮತ್ತು ಬ್ರಿಟನ್ ಮಾತುಕತೆ ಮತ್ತು ಸಹಕಾರವನ್ನು ಬಲಪಡಿಸುವ ಕುರಿತು ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಮತ್ತು ಚೀನಾದ ಅಧ್ಯಕ್ಷ ಷಿ ಜಿನ್ಪಿಂಗ್ ಅವರು ಚರ್ಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.