ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಚೀನಾದಲ್ಲಿ ಕೋವಿಡ್–19: ದಿಢೀರ್ ಏರಿಕೆ ಕಂಡ ಸೋಂಕು, ಹೊಸದಾಗಿ 49 ಪ್ರಕರಣ

Last Updated 15 ಜೂನ್ 2020, 4:24 IST
ಅಕ್ಷರ ಗಾತ್ರ

ಬೀಜಿಂಗ್‌: ಕೊರೊನಾ ವೈರಸ್‌ನ ಉಗಮ ಸ್ಥಾನ ಚೀನಾದಲ್ಲಿ ಮತ್ತೆ ಮಹಾಮಾರಿ ರೋಗ ಉಲ್ಬಣವಾಗುವ ಸಾಧ್ಯತೆಗಳು ಕಾಣಿಸಿವೆ. ಚೀನಾದಲ್ಲಿ ಕೊರೊನಾ ಸೋಂಕಿನ 49 ಹೊಸ ಪ್ರಕರಣಗಳು ವರದಿಯಾಗಿದೆ. ಇವುಗಳಲ್ಲಿ ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ 36 ಪ್ರಕರಣಗಳು ಪತ್ತೆಯಾಗಿವೆ.

ಚೀನಾದಲ್ಲಿ ಕಳೆದ ವರ್ಷ ಈ ಸಾಂಕ್ರಾಮಿಕ ರೋಗವು ಮೊದಲು ಹೊರಹೊಮ್ಮಿತು. ಅದಾದ ಬಳಿಕ ನಿಯಂತ್ರಣಕ್ಕೆ ತರಲಾಯಿತಾದರೂ ಕಳೆದ ವಾರ ರಾಜಧಾನಿಯಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿವೆ.

ಬೀಜಿಂಗ್‌ನಲ್ಲಿ ಪತ್ತೆಯಾಗಿರುವ ಪ್ರಕರಣಗಳ ಜೊತೆಗೆ, ಬೀಜಿಂಗ್ ಅನ್ನು ಸುತ್ತುವರಿದಿರುವ ಹೆಬೀ ಪ್ರಾಂತ್ಯದಲ್ಲಿ ಮೂರು ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿದೆ.

ಬೀಜಿಂಗ್‌ನ ಕ್ಸಿನ್‌ಫಾಡಿ ಆಹಾರ ಮಾರುಕಟ್ಟೆಯಲ್ಲಿರುವ ಕಾರ್ಮಿಕರ ಸಾಮೂಹಿಕ ಪರೀಕ್ಷೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ, ಜೊತೆಗೆ ಅವರ ಹತ್ತಿರ ವಾಸಿಸುವವರು ಮತ್ತು ಇತ್ತೀಚಿನ ವಾರಗಳಲ್ಲಿ ಅಲ್ಲಿಗೆ ಭೇಟಿ ಮಾಡಿದವರನ್ನು ಕೂಡ ಪತ್ತೆಹಚ್ಚಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಈ ಪ್ರದೇಶದ 46,000 ನಿವಾಸಿಗಳಿಗೆ ವೈರಸ್ ಪರೀಕ್ಷೆ ನಡೆಸಲು ಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಈಗಾಗಲೇ 10,000 ಕ್ಕೂ ಹೆಚ್ಚಿನ ಜನರನ್ನು ಪರೀಕ್ಷಿಸಲಾಗಿದೆ.

ಮಾರುಕಟ್ಟೆಯ ಸಮೀಪವಿರುವ ಹನ್ನೊಂದು ವಸತಿ ಪ್ರದೇಶಗಳನ್ನು ಲಾಕ್‌ಡೌನ್ ಮಾಡಲಾಗಿದೆ ಮತ್ತು ಹಲವಾರು ನಗರಗಳ ನಿವಾಸಿಗಳು ಬೀಜಿಂಗ್‌ಗೆ ಪ್ರಯಾಣಿಸದಂತೆ ಎಚ್ಚರಿಕೆ ನೀಡಲಾಗಿದೆ. ಅಧಿಕಾರಿಗಳು ಮಾರುಕಟ್ಟೆಗೆ ಭೇಟಿ ನೀಡಿದವರನ್ನು ಪತ್ತೆಹಚ್ಚುವ ಪ್ರಯತ್ನಗಳನ್ನು ಚುರುಕುಗೊಳಿಸುತ್ತಿದ್ದಾರೆ.

ಚೀನಾದಲ್ಲಿ ಒಟ್ಟು 177 ಜನರು ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.49 ಹೊಸ ಪ್ರಕರಣಗಳು ವರದಿಯಾಗಿದ್ದು, ಬೀಜಿಂಗ್‌ನಲ್ಲಿ ಸಾಮೂಹಿಕ ಪರೀಕ್ಷೆಯನ್ನು ಪ್ರಾರಂಭಿಸಿದೆ. ಇವುಗಳಲ್ಲಿ 18 ಹೊಸ ಲಕ್ಷಣರಹಿತ ಪ್ರಕರಣಗಳೂ ಇದ್ದು, ಅವುಗಳಲ್ಲಿ ಏಳು ದೇಶೀಯವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT