ಬೀಜಿಂಗ್: ‘ಅಮೆರಿಕ ಸಂಸತ್‌ನ ಸ್ಪೀಕರ್ ನ್ಯಾನ್ಸಿ ಪೆಲೊಸಿ ಅವರು ತಾವು ಕೈಗೊಂಡಿರುವ ಏಷ್ಯಾ ಪ್ರವಾಸದ ವೇಳೆ ತೈವಾನ್‌ಗೆ ಭೇಟಿ ಕೊಟ್ಟರೆ ಆ ರಾಷ್ಟ್ರ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಚೀನಾ ಮಂಗಳವಾರ ಎಚ್ಚರಿಸಿದೆ.

‘ಅಮೆರಿಕವು ಚೀನಾದ ಸಾರ್ವಭೌಮತ್ವಕ್ಕೆ ಧಕ್ಕೆ ತರಲು ಪ್ರಯತ್ನಿಸಿದರೆ, ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ಮುಂದೆ ಆಗಬಹುದಾದ ಅನಾಹುತದ ಹೊಣೆಯನ್ನೂ ಆ ದೇಶವೇ ಹೊರಬೇಕಾಗುತ್ತದೆ’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಹುವಾ ಚುನ್‌ಯಿಂಗ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

‘ಇಂತಹ ಭೇಟಿಯು ಅತ್ಯಂತ ಅಪಾಯಕಾರಿ ಹಾಗೂ ಪ್ರಚೋದನಾಕಾರಿ’ ಎಂದು ವಿಶ್ವಸಂಸ್ಥೆಯಲ್ಲಿ ಚೀನಾದ ರಾಯಭಾರಿ ಜಾಂಗ್ ಹುನ್ ಸೋಮವಾರ ತಿಳಿಸಿದ್ದರು.

‘ತೈವಾನ್‌ಗೆ ಭೇಟಿ ನೀಡುವ ಹಕ್ಕು ಸ್ಪೀಕರ್‌ಗೆ ಇದೆ’ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಮಿತಿ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.