ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ: ಅತ್ಯಾಧುನಿಕ ಕಡಲ ರೇಡಾರ್‌ ಅಭಿವೃದ್ಧಿ

Last Updated 9 ಜನವರಿ 2019, 20:15 IST
ಅಕ್ಷರ ಗಾತ್ರ

ಬೀಜಿಂಗ್‌: ಭಾರತದಷ್ಟು ವಿಶಾಲವಾದ ಪ್ರದೇಶದ ಮೇಲೆ ನಿಗಾವಹಿಸುವಷ್ಟು ಸಾಮರ್ಥ್ಯವುಳ್ಳ ಸಣ್ಣ ಗಾತ್ರದ ಅತ್ಯಾಧುನಿಕ ಕಡಲ ರೇಡಾರ್‌ ಅನ್ನು ಚೀನಾ ಅಭಿವೃದ್ಧಿ ಪಡಿಸಿದೆ.

ಈ ರೇಡಾರ್ ವ್ಯವಸ್ಥೆಯನ್ನು ಚೀನಾ ನೌಕಾಪಡೆಯ ಸಂಪೂರ್ಣ ಮೇಲ್ವಿಚಾರಣೆ ನಡೆಸಲಿದೆ. ಸದ್ಯ ಅಸ್ತಿತ್ವದಲ್ಲಿರುವ ತಂತ್ರಜ್ಞಾನಕ್ಕಿಂತ ಶರವೇಗದಲ್ಲಿ ಶತ್ರುಗಳ ಹಡಗು, ವಿಮಾನ ಮತ್ತು ಕ್ಷಿಪಣಿಗಳಿಂದ ಎದುರಾಗುವ ಅಪಾಯಗಳನ್ನು ಪತ್ತೆ ಹಚ್ಚಲು ಇದು ನೆರವಾಗಲಿದೆ.

ಓವರ್‌ ದಿ ಹಾರಿಜಾನ್‌ (ಒಟಿಎಚ್‌) ಯೋಜನೆಯ ಭಾಗವಾಗಿ ಈ ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗಿದೆ.

ಚೀನಾ ವಿಜ್ಞಾನ ಅಕಾಡೆಮಿ(ಸಿಎಎಸ್‌) ಮತ್ತು ಚೀನಾ ಎಂಜಿನಿಯರಿಂಗ್‌ ಅಕಾಡೆಮಿ (ಸಿಎಇ) ಈ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ ಹೆಗ್ಗಳಿಕೆ ಗಳಿಸಿದೆ.

ಈ ಸಾಧನೆಗಾಗಿ ಸಿಎಎಸ್‌ನ ಶಿಕ್ಷಣ ತಜ್ಞ ಲಿಯು ಯಂಗ್ಟನ್‌ ಮತ್ತು ಸೇನೆಯ ವಿಜ್ಞಾನಿ ಕಿಯಾನ್‌ ಕಿಹು ಅವರಿಗೆ 1.116 ಡಾಲರ್‌ (₹786.75 ಕೋಟಿ) ಮೊತ್ತದ ದೇಶದ ಅತ್ಯುತ್ತಮ ವಿಜ್ಞಾನ ಪ್ರಶಸ್ತಿಯನ್ನು ಅಧ್ಯಕ್ಷ ಷಿ ಜಿನ್‌ಪಿಂಗ್‌ ಮಂಗಳವಾರ ಪ್ರದಾನ ಮಾಡಿದ್ದಾರೆ.

ಚೀನಾದ ಹೊರತಾಗಿ ಅಮೆರಿಕದ ರಕ್ಷಣಾ ಸಾಮಗ್ರಿಗಳ ಗುತ್ತಿಗೆ ಪಡೆಯುವ ಕಂಪನಿ ‘ರೇಥಿಯಾನ್‌’ 2016 ರಲ್ಲಿ ಇದೇ ರೀತಿಯ ಈ ತಂತ್ರಜ್ಞಾನ ಅಭಿವೃದ್ಧಿಪಡಿಸಿ ಪೇಟೆಂಟ್‌ ಪಡೆದುಕೊಂಡಿದೆ.

*
ಸದ್ಯದ ತಂತ್ರಜ್ಞಾನಗಳಿಂದ ಕಡಲ ಪ್ರದೇಶದ ಶೇಕಡ 20 ರಷ್ಟು ಮಾತ್ರವೇ ಮೇಲ್ವಿಚಾರಣೆ ನಡೆಸಬಹುದು.
–ಲಿಯು ಯಂಗ್ಟನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT