ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ವಿ–ಚಾಟ್ ನಿಷೇಧಿಸಿದರೆ, ನಾವು ಯಾಕೆ ಆ್ಯಪಲ್ ಬಳಸಬೇಕು ?: ಚೀನಾ ಪ್ರಶ್ನೆ

ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾಯೊ ಲಿಜಿಯಾನ್ ಪ್ರಶ್ನೆ
Last Updated 28 ಆಗಸ್ಟ್ 2020, 5:57 IST
ಅಕ್ಷರ ಗಾತ್ರ

ಬೀಜಿಂಗ್‌: ಅಮೆರಿಕ ವಿ–ಚಾಟ್‌ ಅಪ್ಲಿಕೇಷನ್‌ ನಿಷೇಧಿಸಿದರೆ, ಚೀನಾದಲ್ಲಿ ’ಆ್ಯಪಲ್‌’ ಉತ್ಪನ್ನಗಳನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಎಚ್ಚರಿಸಿದ್ದಾರೆ.

ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಕಾರಣದಿಂದ ಚೀನಾಮೂಲದ ವಿ–ಚಾಟ್ ಮತ್ತು ಟಿಕ್‌ಟಾಕ್‌ ಅಪ್ಲಿಕೇಷನ್‌ಗಳನ್ನು ಸೆಪ್ಟೆಂಬರ್ ತಿಂಗಳಲ್ಲಿ ನಿಷೇಧಿಸುತ್ತಿದ್ದೇವೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿಕೆಗೆ ಪ್ರತಿಯಾಗಿ ಚೀನಾದ ವಿದೇಶಾಂಗ ಸಚಿವಾಲಯ ಈ ರೀತಿ ಎಚ್ಚರಿಕೆ ನೀಡಿದೆ.

ಈ ಕುರಿತು ಟ್ವೀಟ್‌ ಮಾಡಿರುವಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾಯೊ ಲಿಜಿಯಾನ್, ’ನೀವು ವಿ–ಚಾಟ್‌ ನಿಷೇಧಿಸುವುದಾದರೆ, ನಾವೇಕೆ ಅಮೆರಿಕ ಮೂಲದ ಐಫೋನ್ ಮತ್ತು ಆ್ಯಪಲ್ ಉತ್ಪನ್ನಗಳನ್ನು ಬಳಕೆ ಮಾಡಬೇಕು’ ಎಂದು ಪ್ರಶ್ನಿಸಿದ್ದಾರೆ.

’ಟ್ರಂಪ್ ಹೇಳಿಕೆ ನೀಡಿದ ಬೆನ್ನಿಗೆ, ಚೀನಾದ ಹಲವು ಗ್ರಾಹಕರು ಐಫೋನ್, ಆ್ಯಪಲ್‌ ಉತ್ಪನ್ನಗಳನ್ನು ನಾವೇಕೆ ಬಳಸಬೇಕೆಂಬ ಪ್ರಶ್ನೆಯನ್ನು ಎತ್ತಿದ್ದಾರೆ.

ಲಿಜಿಯಾನ್ ಅವರ ಈ ಹೇಳಿಕೆಗೆ ಚೀನಾದ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.’ನಾನು ಆ್ಯಪಲ್ ಉತ್ಪನ್ನಗಳನ್ನು ಬಳಸುತ್ತೇನೆ. ಆದರೆ, ನನ್ನ ದೇಶವನ್ನೂ ಪ್ರೀತಿಸುತ್ತೇನೆ ’ ಎಂದು ಟ್ವಿಟರ್‌ ಹೋಲುವ ವೀಬೊ ಪ್ಲಾಟ್‌ಫಾರ್ಮ್‌ನ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಆ್ಯಪಲ್ ಫೋನ್ ಎಷ್ಟೇ ಚೆನ್ನಾಗಿದ್ದರೂ, ಅದು ಕೇವಲ ಫೋನ್ ಅಷ್ಟೇ. ಬೇಕಾದರೆ ಅದನ್ನು ನಾವು ಬದಲಿಸಬಹುದು. ಆದರೆ, ವಿ–ಚಾಟ್ ಅಪ್ಲಿಕೇಷನ್ ಬಳಕೆಯ ವಿಚಾರದಲ್ಲಿ ಹಾಗೆ ಮಾಡಲಾಗುವುದಿಲ್ಲ’ ಎಂದು ಮತ್ತೊಬ್ಬ ಬಳಕೆದಾರರು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ’ಈ ಕಾಲದ ಚೀನಾ ಜನರು, ವಿಶೇಷವಾಗಿ ಉದ್ಯಮಿಗಳು ವಿ–ಚಾಟ್‌ ಬಳಕೆಯನ್ನು ನಿಲ್ಲಿಸಿದರೆ, ಅವರು ತನ್ನ ಆತ್ಮವನ್ನೇ ಕಳೆದುಕೊಂಡಂತೆ’ ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT