ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೃಪ್ತಿ, ಸಂತೋಷದ ಮಾರ್ಗ ತೋರಿಸಿದ ಭಾರತ: ಮೋಹನ್ ಭಾಗವತ್

ಮೂರನೇ ವಿಶ್ವ ಹಿಂದೂ ಕಾಂಗ್ರೆಸ್‌ ಅಧಿವೇಶನದಲ್ಲಿ ಆರ್‌ಎಸ್‌ಎಸ್‌ ಸರಸಂಘ ಚಾಲಕ ಮೋಹನ್ ಭಾಗವತ್
Published 24 ನವೆಂಬರ್ 2023, 15:40 IST
Last Updated 24 ನವೆಂಬರ್ 2023, 15:40 IST
ಅಕ್ಷರ ಗಾತ್ರ

ಬ್ಯಾಂಕಾಕ್‌ (ಪಿಟಿಐ): ‘ಕಮ್ಯುನಿಸಂ, ಬಂಡವಾಳಶಾಹಿಯ ಪ್ರಯೋಗದಿಂದ ಎಡವುತ್ತಿರುವ ಜಗತ್ತಿಗೆ, ಭಾರತವು ಸಂತೋಷ ಮತ್ತು ತೃಪ್ತಿಯ ಮಾರ್ಗವನ್ನು ತೋರಿಸುತ್ತಿದೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದರು.

ಶುಕ್ರವಾರ ಇಲ್ಲಿ ನಡೆದ ಮೂರನೇ ಹಿಂದೂ ಕಾಂಗ್ರೆಸ್‌ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಪ್ರಪಂಚದಾದ್ಯಂತ ಇರುವ ಹಿಂದೂಗಳು ಪರಸ್ಪರ ಸಂಪರ್ಕದಿಂದಿರಬೇಕು‘ ಎಂದರು.

’ಪ್ರತಿಯೊಬ್ಬ ಹಿಂದೂವಿನ ಜೊತೆಗೆ ಸಂಪರ್ಕ ಸಾಧಿಸಬೇಕು. ಈ ಸಂಪರ್ಕವನ್ನು ಬಲಪಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. ಈ ಮೂಲಕ ಜಗತ್ತಿನಲ್ಲಿರುವ ಪ್ರತಿಯೊಬ್ಬರ ಜತೆ ಸಂಪರ್ಕ ಸಾಧಿಸಿ ಎಲ್ಲರ ಹೃದಯ ಗೆಲ್ಲಬೇಕು’ ಎಂದು ಅವರು ವಿಶ್ವದ ವಿವಿಧೆಡೆಯ ಚಿಂತಕರು, ಹೋರಾಟಗಾರರು, ನಾಯಕರು ಮತ್ತು ಉದ್ಯಮಿಗಳ ಸಭೆಯನ್ನುದ್ದೇಶಿಸಿ ಹೇಳಿದರು.

‘ಎಲ್ಲರನ್ನೂ ನಾವು ಸಂಪರ್ಕಿಸಬೇಕು. ಸೇವೆಯಿಂದಲೇ ನಮ್ಮೊಟ್ಟಿಗೆ ಕರೆದೊಯ್ಯಬೇಕು. ನಮ್ಮೊಳಗೆ ಆ ಶಕ್ತಿಯಿದೆ. ನಿಸ್ವಾರ್ಥ ಸೇವೆಯ ವಿಷಯದಲ್ಲಿ ಪ್ರಪಂಚದಲ್ಲೇ ಛಾಪು ಮೂಡಿಸಿದ್ದೇವೆ. ಇದು ನಮ್ಮ ಸಂಪ್ರದಾಯ, ಮೌಲ್ಯಗಳಲ್ಲೂ ಇದೆ. ಆದ್ದರಿಂದಲೇ ಜನರನ್ನು ತಲುಪಿ, ಅವರ ಹೃದಯ ಬಿಟ್ಟು ಬೇರೆ ಇನ್ನೇನನ್ನು ಗೆಲ್ಲಲ್ಲ’ ಎಂದರು.

‘ಭಾರತವು ಸಂತೋಷ ಮತ್ತು ತೃಪ್ತಿಗೆ ದಾರಿ ಮಾಡಿಕೊಡುತ್ತಿದೆ ಎಂಬುದನ್ನು ಕೋವಿಡ್‌ ಸಾಂಕ್ರಾಮಿಕದ ನಂತರ ಅರಿತಿರುವ ಜಗತ್ತು, ಇದೀಗ ಅವಿರೋಧವಾಗಿ ಈ ಬಗ್ಗೆಯೇ ಯೋಚಿಸುತ್ತಿದ್ದು, ಹಿಂದೂ ಧರ್ಮದ ಕಡೆಗೆ ತಿರುಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT