ಲಂಡನ್: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಇಂಗ್ಲೆಂಡ್‌ನಲ್ಲಿ ಡಿಸೆಂಬರ್ 2 ರವರೆಗೆ ರಾಷ್ಟ್ರೀಯ ಲಾಕ್‌ಡೌನ್ ಜಾರಿಗೆ ತರುವ ಸಾಧ್ಯತೆಗಳಿವೆ.

ಅಗತ್ಯ ಪದಾರ್ಥಗಳಿಗಾಗಿ ಅಂಗಡಿಗಳನ್ನು ತೆರೆಯುವುದನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ಮುಚ್ಚಲು ತಿಳಿಸಲಾಗುತ್ತದೆ. ಆದರೆ, ಶಾಲೆಗಳು, ವಿಶ್ವವಿದ್ಯಾಲಯಗಳು ಮತ್ತು ನ್ಯಾಯಾಲಯ ತೆರೆದಿರುತ್ತವೆ ಎಂದು ಅಲ್ಲಿನ 'ಐ ಟಿವಿ' ರಾಜಕೀಯ ಸಂಪಾದಕ ಹೇಳಿದ್ದಾರೆ.

ಬ್ರಿಟನ್‌ನಲ್ಲಿ ಸದ್ಯ 10,11,660 ಪ್ರಕರಣಗಳಿದ್ದು, 46,555 ಮಂದಿ ಈ ವರೆಗೆ ಕೋವಿಡ್‌ಗೆ ಪ್ರಾಣ ತೆತ್ತಿದ್ದಾರೆ.

ಇನ್ನು ವಿಶ್ವದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ಅ.31ರ ಹೊತ್ತಿಗೆ 4.6 ಕೋಟಿ (4,61,77,574) ಮೀರಿದೆ. ಸಾವಿನ ಸಂಖ್ಯೆ 1.19 ಲಕ್ಷ (11,97,454) ದಾಟಿದೆ. ಈ ಮಾಹಿತಿ 'ಕೋವಿಡ್ ವರ್ಲ್ಡೋಮೀಟರ್' ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಆದರೆ, 4.6 ಕೋಟಿ ಸೋಂಕಿತರ ಪೈಕಿ ಈಗಾಗಲೇ 3,33,85,937 ಮಂದಿ ಗುಣಮುಖರಾಗಿದ್ದಾರೆ. ಹೀಗಾಗಿ ವಿಶ್ವದಲ್ಲಿ ಸಕ್ರಿಯವಾಗಿರುವ ಸೋಂಕು ಪ್ರಕರಣಗಳ ಸಂಖ್ಯೆ 1,15,94,183 ಮಾತ್ರ. ಈ ಪೈಕಿ 1,15,10,373 ಮಂದಿಯ ಪರಿಸ್ಥಿತಿ ಸಾಧಾರಣವಾಗಿದ್ದರೆ, 83,810 ಮಂದಿಯ ಆರೋಗ್ಯ ಸ್ಥಿತಿ ಹದಗೆಟ್ಟಿದೆ.

ಇನ್ನು ವಿಶ್ವದಲ್ಲೇ ಅತಿ ಹೆಚ್ಚು ಸೋಂಕು ಪ್ರಕರಣಗಳನ್ನು ಹೊಂದಿರುವ ಅಮೆರಿಕದಲ್ಲಿ 93,36,073 ಸೋಂಕಿತರಿದ್ದಾರೆ. ಈ ಪೈಕಿ 60,30,186 ಗುಣಮುಖರಾಗಿದ್ದರೆ, 2,35,453 ಮಂದಿ ಮೃತಪಟ್ಟಿದ್ದಾರೆ.

ಭಾರತದಲ್ಲಿ 81,78,645 ಸೋಂಕು ಪ್ರಕರಣಗಳಿವೆ. 74,81,951ಮಂದಿ ಗುಣಮುಖರಾಗಿದ್ದಾರೆ. 1,22,099 ಮಂದಿ ಮೃತಪಟ್ಟಿದ್ದಾರೆ.

ಬ್ರೆಜಿಲ್‌ನಲ್ಲಿ 55,19,528 ಸೋಂಕಿತರಿದ್ದಾರೆ. ಈ ಪೈಕಿ 49,66,264 ಗುಣವಾಗಿದ್ದಾರೆ. 1,59,562 ಮಂದಿ ಸೋಂಕಿಗೆ ಪ್ರಾಣ ತೆತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.