ಪೇಶಾವರ: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಖುರ್ರಂ ಜಿಲ್ಲೆಯಲ್ಲಿ ಸುನ್ನಿ ಮತ್ತು ಶಿಯಾ ಸಮುದಾಯಗಳ ನಡುವಣ ಸಂಘರ್ಷ ಮುಂದುವರಿದಿದ್ದು, ಶನಿವಾರ ಮತ್ತಿಬ್ಬರು ಮೃತಪಟ್ಟಿದ್ದಾರೆ.

ಕಳೆದ 10 ದಿನಗಳಲ್ಲಿ ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ 124ಕ್ಕೆ ಏರಿಕೆಯಾಗಿದ್ದು, 170ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಲಿಝೈ ಮತ್ತು ಬಗಾನ್ ಬುಡಕಟ್ಟು ಸಮುದಾಯಗಳ ನಡುವಣ ಸಂಘರ್ಷ ನವೆಂಬರ್ 22ರಂದು ಆರಂಭಗೊಂಡಿತ್ತು. ಪ್ರಯಾಣಿಕರ ವಾಹನಗಳ ಮೇಲೆ ಶಸ್ತ್ರಸಜ್ಜಿತ ಗುಂಪೊಂದು ದಾಳಿ ನಡೆಸಿದ್ದು ಹಿಂಸಾಚಾರ ಆರಂಭವಾಗಲು ಕಾರಣ. ಈ ಘಟನೆಯಲ್ಲಿ 57 ಮಂದಿ ಮೃತಪಟ್ಟಿದ್ದರು.

ಬಗಾನ್ ಬಜಾರ್ ಪ್ರದೇಶದಲ್ಲಿ ಆರಂಭವಾದ ಹಿಂಸಾಚಾರ ಆ ಬಳಿಕ ಬಾಲಿಶ್ಕೆಲ್, ಖಾರ್, ಕಾಲಿ, ಜುಂಜ್ ಅಲಿಝೈ ಮತ್ತು ಮಕ್ಬಲ್ ಪ್ರದೇಶಗಳಿಗೆ ಹರಡಿದ್ದು, ಕಳೆದ ಎರಡು ದಿನಗಳಲ್ಲಿ 37 ಮಂದಿ ಮೃತಪಟ್ಟಿದ್ದಾರೆ.

ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಎರಡೂ ಪಂಗಡಗಳ ನಡುವೆ 10 ದಿನಗಳ ‘ಕದನ ವಿರಾಮ’ ಒಪ್ಪಂದವನ್ನು ಮಾಡಲಾಗಿದೆಯಾದರೂ, ಹಿಂಸಾಚಾರ ಮುಂದುವರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.