ವಾಷಿಂಗ್ಟನ್: ವೈಮಾನಿಕ ದಾಳಿಯ ನಂತರ ನಡೆದ ನಾಟಕೀಯ ಬೆಳವಣಿಗೆಗಳ ಬೆನ್ನಲ್ಲೇ ವೆನೆಜುವೆಲಾದ ಉಪಾಧ್ಯಕ್ಷೆ ಮತ್ತು ಇಂಧನ ಸಚಿವೆ ಡೆಲ್ಸಿ ರಾಡ್ರಿಗಸ್ ಅವರು ಸೋಮವಾರ ದೇಶದ ಹಂಗಾಮಿ ಅಧ್ಯಕ್ಷೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಖಾಸಗಿ ವಲಯದೊಂದಿಗೆ ನಿಕಟ ಸಂಪರ್ಕ ಮತ್ತು ಪಕ್ಷ ನಿಷ್ಠೆಗೆ ಹೆಸರುವಾಗಿಯಾಗಿರುವ 56 ವರ್ಷದ ವಕೀಲೆ ರಾಡ್ರಿಗಸ್ ಅವರಿಗೆ ಶಾಸಕಾಂಗ ಪಕ್ಷದ ನಾಯಕ, ಸಹೋದರ ಜಾರ್ಜ್ ಅವರು ಪ್ರಮಾಣ ವಚನ ಬೋಧಿಸಿದ್ದಾರೆ.

ನಿಕೊಲಸ್ ಮಡೂರೊ ಅನುಪಸ್ಥಿತಿಯಲ್ಲಿ ರಾಡ್ರಿಗಸ್ ಅವರು ದೇಶದ ಜವಾಬ್ದಾರಿ ಹೊರಲಿದ್ದಾರೆ.

ರಾಡ್ರಿಗಸ್ ಅವರ ಜೊತೆಗೆ ಕಳೆದ ಮೇ ತಿಂಗಳಲ್ಲಿ ಆಯ್ಕೆಯಾದ 283 ಶಾಸಕರೂ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ದೇಶದ ಮೊದಲ ಮಹಿಳೆ, ಶಾಸಕಿ ಸಿಲಿಯಾ ಫ್ಲೋರ್ಸ್ ಅವರು ಬಂಧನದಲ್ಲಿರುವುದಿಂದ ಪ್ರಮಾಣ ವಚನ ಸ್ವೀಕರಿಸಿಲ್ಲ.

ಮಾದಕ ವಸ್ತು ಕಳ್ಳಸಾಗಣೆ ಮತ್ತು ಮಾದಕ ವಸ್ತು ಭಯೋತ್ಪಾದನೆ ಆರೋಪದ ಮೇಲೆ ಶನಿವಾರ ವೆನೆಜುವೆಲಾದ ರಾಜಧಾನಿ ಕರಾಕಸ್ ಮೇಲೆ ದಾಳಿ ಮಾಡಿದ ಅಮೆರಿಕದ ಪಡೆ, ಅಧ್ಯಕ್ಷ ಮಡೂರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಬಂಧಿಸಿ ನ್ಯೂಯಾರ್ಕ್ ನ್ಯಾಯಾಲಯಕ್ಕೆ ಒಪ್ಪಿಸಿತ್ತು.

ಭಾನುವಾರ ನ್ಯಾಯಾಲಯದ ಮುಂದೆ ಹಾಜರಾದ ಮಡೂರೊ, ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ. ನಾನು ನಿರಾಪರಾಧಿ ಎಂದು ಹೇಳಿದ್ದಾರೆ.

ಏತನ್ಮಧ್ಯೆ, ತೈಲ ಸಂಪದ್ಭರಿತ ವೆನೆಜುವೆಲಾದ ಮೇಲೆ ಅಮೆರಿಕದ ದಾಳಿ ನಡೆಸಿರುವುದನ್ನು ಅಂತರರಾಷ್ಟ್ರೀಯ ಸಮುದಾಯಗಳು ಖಂಡಿಸಿವೆ. ಸಾರ್ವಭೌಮ ರಾಷ್ಟ್ರವೊಂದರ ಮೇಲೆ ದಾಳಿ ನಡೆಸುವ ಮೂಲಕ ಟ್ರಂಪ್ ಆಡಳಿತ ಅಂತರರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಹೇಳಿವೆ.

ಮಾತು ಕೇಳದಿದ್ದರೆ ಬೆಲೆ ತೆರಬೇಕು: ಟ್ರಂಪ್

‘ನಾವು ಬಯಸಿದ ರೀತಿಯಲ್ಲಿ ಆಡಳಿತ ನಡೆಸದಿದ್ದರೆ ಭಾರಿ ತೆಲೆ ತೆರಬೇಕಾಗುತ್ತದೆ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರಾಡ್ರಿಗಸ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ಭಾನುವಾರ ‘ನ್ಯೂಯಾರ್ಕ್ ಪೋಸ್ಟ್’ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್, ‘ಅಮೆರಿಕದ ಆಶಯಗಳಿಗೆ ಮಣಿಯದಿದ್ದರೆ ಭಾರಿ ಬೆಲೆ ತೆರಬೇಕಾಗುತ್ತದೆ. ಬಹುಶಃ ನಿಕೊಲಸ್ ಮಡೂರೊ ಅವರಿಗೆ ಆದ ಪರಿಸ್ಥಿತಿಗಿಂತಲೂ ಕೆಟ್ಟ ಸ್ಥಿತಿ ಎದುರಿಸಬೇಕಾದೀತು’ ಎಂದು ಎಚ್ಚರಿಸಿದ್ದಾರೆ. ‘ನಾವು ಬಯಸಿದ್ದನ್ನು ವೆನೆಜುವೆಲಾ ಮಾಡಿದರೆ ಅಮೆರಿಕವು ಅಲ್ಲಿ ಸೇನೆಯನ್ನು ನಿಯೋಜಿಸುವ ಅಗತ್ಯವಿಲ್ಲ’ ಎಂದೂ ಹೇಳಿದ್ದಾರೆ.

ಟ್ರಂಪ್ ಅವರು ಎಚ್ಚರಿಕೆ ನೀಡಿದ ಕೆಲ ಗಂಟೆಗಳಲ್ಲೇ ಡೆಲ್ಸಿ ಅವರು ಅಮೆರಿಕದ ಬಗ್ಗೆ ತಾವು ಹೊಂದಿದ್ದ ಕಠಿಣ ನಿಲುವನ್ನು ಅಲ್ಪ ಸಡಿಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.