ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಮುಂದೆ ದೀಪಾವಳಿ ಹಬ್ಬಕ್ಕೆ ನ್ಯೂಯಾರ್ಕ್‌ ನಗರದ ಶಾಲೆಗಳಿಗೆ ರಜೆ: ಭಾರತೀಯರ ಸಂತಸ

ಮೇಯರ್ ಎರಿಕ್ ಅಡಮ್ಸ್ ಅವರು ಸೋಮವಾರ ಈ ಘೋಷಣೆ ಮಾಡಿದ್ದಾರೆ
Published 27 ಜೂನ್ 2023, 2:32 IST
Last Updated 27 ಜೂನ್ 2023, 2:32 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಅಮೆರಿಕದ ಅತಿ ದೊಡ್ಡ ನಗರವಾಗಿರುವ ನ್ಯೂಯಾರ್ಕ್ ನಗರದಲ್ಲಿ ಇನ್ಮುಂದೆ ಬೆಳಕಿನ ಹಬ್ಬ ದೀಪಾವಳಿಗೆ ಎಲ್ಲ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಮೇಯರ್ ಎರಿಕ್ ಅಡಮ್ಸ್ ಅವರು ಸೋಮವಾರ ಈ ಘೋಷಣೆ ಮಾಡಿದ್ದಾರೆ. ನ್ಯೂಯಾರ್ಕ್‌ನಲ್ಲಿನ ಭಾರತೀಯರು ಒಳಗೊಂಡಂತೆ ದಕ್ಷಿಣ ಏಷ್ಯಾದವರಿಗೆ ಇದೊಂದು ಸಂತಸದ ಸಂಗತಿ ಎಂದು ಅವರು ಬಣ್ಣಿಸಿದ್ದಾರೆ.

ಭಾರತೀಯ ಮೂಲದ ನ್ಯೂಯಾರ್ಕ್ ಸಂಸದೆಯಾಗಿರುವ ಜೆನ್ನಿಫರ್ ರಾಜಕುಮಾರ್ ಅವರು ಇದಕ್ಕಾಗಿ ಸಾಕಷ್ಟು ಪ್ರಯತ್ನ ಮಾಡಿದ್ದರು.

ಈ ವರ್ಷ ನವೆಂಬರ್ 12 ರಂದು ದೀಪಾವಳಿ ಬಂದಿದೆ. ಆಗ ನ್ಯೂಯಾರ್ಕ್‌ನ ಶಾಲೆಯ ರಜೆ ದಿನಗಳು ನಿಗದಿಯಾಗಿವೆ. ಹೀಗಾಗಿ ಇದರ ಲಾಭ 2024 ರ ದೀಪಾವಳಿ ಹಬ್ಬಕ್ಕೆ ಅಲ್ಲಿನ ಜನರಿಗೆ ಸಿಗಲಿದೆ.

‘ನ್ಯೂಯಾರ್ಕ್ ನಗರ ಎಲ್ಲರಿಗೂ ಎಂದು ಈಗ ನಾವು ಹೆಮ್ಮೆಯಿಂದ ಹೇಳಬಹುದು. ನಮ್ಮ ಈ ನಿರ್ಧಾರಕ್ಕೆ ಗವರ್ನರ್ ಶೀಘ್ರವೇ ಸಹಿ ಮಾಡಲಿದ್ದಾರೆ’ ಎಂದು ಎರಿಕ್ ಅಡಮ್ಸ್ ತಿಳಿಸಿದ್ದಾರೆ.

ಇದಕ್ಕಾಗಿ ಮೇಯರ್ ಕಚೇರಿಯಲ್ಲಿ ಜೆನ್ನಿಫರ್ ರಾಜಕುಮಾರ್ ಸೇರಿದಂತೆ ಹಲವು ಭಾರತೀಯರು ಮೇಯರ್ ಅವರಿಗೆ ಹೂ ಹಾರ ಹಾಕಿ ಸನ್ಮಾನ ಮಾಡಿದರು.

ಅಮೆರಿಕದಲ್ಲಿ ದೀಪಾವಳಿ ಹಬ್ಬಕ್ಕೆ ಸಾರ್ವತ್ರಿಕ ರಜೆಗಾಗಿ ಇತ್ತೀಚೆಗೆ ಅಲ್ಲಿನ ಸಂಸದೆ ಗ್ರೇಸ್ಡ್ ಮೆಂಗ್ ಅವರು ಸಂಸತ್ತಿನಲ್ಲಿ ಮಸೂದೆ ಮಂಡಿಸಿದ್ದಾರೆ. ಇದು ಕಾನೂನಾಗಿ ಜಾರಿಗೆ ಬಂದಲ್ಲಿ ಅಮೆರಿಕದಲ್ಲಿ 12 ದಿನ ಸಾರ್ವತ್ರಿಕ ರಜೆ ಸಿಕ್ಕಂತಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT