ನ್ಯೂಯಾರ್ಕ್: ‘ಕಳೆದ ವರ್ಷ ನಡೆದ ಅಧ್ಯಕ್ಷೀಯ ಚುನಾವಣೆ ವೇಳೆ ತಮ್ಮ ಪರ ಪ್ರಚಾರ ನಡೆಸಲು ಸೆಲೆಬ್ರಿಟಿ ಕಲಾವಿದರಿಗೆ ಆಗಿನ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ದೊಡ್ಡ ಮೊತ್ತದ ಹಣ ನೀಡಿದ್ದು, ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಾಯಿಸಿದ್ದಾರೆ.

‘ನಿಮ್ಮ ಪರ ಪ್ರಚಾರ ನಡೆಸಲು ಹಣ ನೀಡಲು ಅವಕಾಶವಿಲ್ಲ. ಆ ರೀತಿ ಮಾಡುವುದು ಸಂಪೂರ್ಣವಾಗಿ ಕಾನೂನಿಗೆ ವಿರುದ್ಧವಾಗಿದೆ. ಒಂದೊಮ್ಮೆ ರಾಜಕಾರಣಿಗಳು ತಮ್ಮ ಪರ ಪ್ರಚಾರಕ್ಕೆ ಹಣ ಪಾವತಿಸಿದರೆ ಏನಾಗಬಹುದು ಎಂದು ಯೋಚಿಸಿ’ ಎಂದು ಟ್ರಂಪ್ ಅವರು ಸಾಮಾಜಿಕ ಜಾಲತಾಣ ‘ಟ್ರೂಥ್’ನಲ್ಲಿ ಬರೆದುಕೊಂಡಿದ್ದಾರೆ.

‘ಕಮಲಾ ಹ್ಯಾರಿಸ್ ಬೆಂಬಲಿಸಲು ಸೆಲೆಬ್ರಿಟಿಗಳಾದ ಬಿಯಾನ್ಸೆ, ಒಪ್ರಾ, ಅಲ್ ಶಾರ್ಪ್ಟನ್ ಅವರಿಗೆ ಹಣ ಪಾವತಿಸಲಾಗಿತ್ತು. ಆ ಮೂಲಕ ಕಾನೂನು ಮುರಿದಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ಕಳೆದ ವರ್ಷ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದಿಂದ 79 ವರ್ಷದ ಡೊನಾಲ್ಡ್ ಟ್ರಂಪ್ ಗೆದ್ದು ಅಧ್ಯಕ್ಷರಾಗಿ, ಶ್ವೇತಭವನ ಪ್ರವೇಶಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.