ವಾಷಿಂಗ್ಟನ್:ರಾಜಕೀಯ ಶತ್ರುಗಳೊಂದಿಗೆ ಸೇರಿಕೊಂಡು ತನ್ನನ್ನು ಮೌನಗೊಳಿಸಲು ಟ್ವಿಟರ್ ಸಂಚು ಹೂಡಿದೆ ಎಂದು ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪ ಮಾಡಿದ್ದಾರೆ.

ಅಮೆರಿಕ ಕ್ಯಾಪಿಟಲ್‌ಗೆ ಟ್ರಂಪ್ ಬೆಂಬಲಿಗರು ನಡೆಸಿದದಾಂಧಲೆಗೆ ಮತ್ತಷ್ಟು ಪ್ರಚೋದನೆ ನೀಡುವ ಅಪಾಯವಿದೆ ಎಂದು ಪರಿಗಣಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗಿತ್ತು.

ಟ್ವಿಟರ್ ವಾಕ್ ಸ್ವಾತಂತ್ರ್ಯವನ್ನು ನಿಷೇಧಿಸಿದೆ. ಇಂದು ರಾತ್ರಿ ಟ್ವಿಟರ್ ನೌಕರರು ಡೆಮಾಕ್ರಾಟ್ಸ್ ಮತ್ತು ರ‍್ಯಾಡಿಕಲ್ ಲೆಫ್ಟ್ ಜೊತೆ ಸಮನ್ವಯ ಮಾಡಿಕೊಂಡು ನನ್ನನ್ನು ಮೌನಗೊಳಿಸುವ ನಿಟ್ಟಿನಲ್ಲಿ ತನ್ನ ಫ್ಲ್ಯಾಟ್‌ಫಾರ್ಮ್‌ನಿಂದ ನನ್ನ ಖಾತೆಯನ್ನು ತೆಗೆದು ಹಾಕಿದೆ. ನೀವು 75,000,000 ಮಹಾನ್ ದೇಶಭಕ್ತರು ನನಗೆ ಮತ ಹಾಕಿದ್ದೀರಿ ಎಂದು ಡೊನಾಲ್ಡ್ ಟ್ರಂಪ್ತಿಳಿಸಿದರು.

ಇದನ್ನೂ ಓದಿ:ಅಮೆರಿಕ ಹಿಂಸಾಚಾರ: ಡೊನಾಲ್ಡ್ ಟ್ರಂಪ್ ಟ್ವಿಟರ್ ಖಾತೆ ಶಾಶ್ವತವಾಗಿ ಸ್ಥಗಿತ

ಡೊನಾಲ್ಡ್ ಟ್ರಂಪ್ ವೈಯಕ್ತಿಕ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಿದ ಬೆನ್ನಲ್ಲೇ 'ಟೀಮ್ ಟ್ರಂಪ್' ಅಭಿಯಾನದ ಮತ್ತು 'ಪೊಟಸ್' ಅಧಿಕೃತ ಖಾತೆಯಿಂದ ಟ್ವೀಟ್ ಮಾಡಲು ಪ್ರಾರಂಭಿಸಿದ್ದರು. ಆದರೆ ಟೀಮ್ ಟ್ರಂಪ್ ಖಾತೆಯನ್ನು ಅಮಾನತುಗೊಳಿಸಿರುವ ಟ್ವಿಟರ್, ಪೊಟಸ್ ಖಾತೆಯಿಂದಲೂ ಎಲ್ಲ ಟ್ವೀಟ್‌ಗಳನ್ನು ಅಳಿಸಿ ಹಾಕಿದೆ.

ಈ ಎಲ್ಲದರ ಹಿನ್ನೆಲೆಯಲ್ಲಿ ನಿಕಟ ಭವಿಷ್ಯದಲ್ಲೇ ತಮ್ಮ ಮಾತನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ತಮ್ಮದೇ ಆದ ಫ್ಲ್ಯಾಟ್‌ಫಾರ್ಮ್ ನಿರ್ಮಿಸುವುದಾಗಿಯೂ ಡೊನಾಲ್ಡ್ ಟ್ರಂಪ್ ಹೇಳಿದರು.

ನಾವು ಹಲವಾರು ಇತರೆ ಸಾಮಾಜಿಕ ಫ್ಲ್ಯಾಟ್‌ಫಾರ್ಮ್‌ಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಶೀಘ್ರದಲ್ಲೇ ಈ ಬಗ್ಗೆ ದೊಡ್ಡ ಪ್ರಕಟಣೆಯನ್ನು ಮಾಡಲಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮದೇ ಆದ ವೇದಿಕೆಯನ್ನು ನಿರ್ಮಿಸುವ ಸಾಧ್ಯತೆಯನ್ನು ಎದುರು ನೋಡುತ್ತಿದ್ದೇವೆ. ನಮ್ಮನ್ನು ಮೌನಿಯಾಗಿಸಲು ಸಾಧ್ಯವಿಲ್ಲ ಎಂದು ಘೋಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.