ನ್ಯೂಯಾರ್ಕ್/ವಾಷಿಂಗ್ಟನ್: ‘ಭಾರತದೊಂದಿಗೆ ಮಾಡಿಕೊಂಡ ವ್ಯಾಪಾರ ಒಪ್ಪಂದವು ಐತಿಹಾಸಿಕವಾದುದು. ಭಾರತವೂ ಸೇರಿ ವ್ಯಾಪಾರ ಒಪ್ಪಂದ ಮಾಡಿಕೊಂಡ ಇತರ ಹಲವು ದೇಶಗಳಿಗೆ ಅಮೆರಿಕವು ಭಾರಿ ಪ್ರಮಾಣದ ಕಲ್ಲಿದ್ದಲನ್ನು ರಫ್ತು ಮಾಡಲಿದೆ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದರು.

‘ಚಾಂಪಿಯನ್ ಆಫ್ ಕೋಲ್’ ಎಂಬ ಹೆಸರಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ನಮ್ಮ ನಾಯಕತ್ವದಲ್ಲಿ ಅಮೆರಿಕವು ಹೆಚ್ಚಿನ ಪ್ರಮಾಣದ ಇಂಧನ ರಫ್ತು ಮಾಡುವ ದೇಶವಾಗಿ ಹೊರಹೊಮ್ಮಲಿದೆ. ಜಪಾನ್, ಕೊರಿಯಾ, ಭಾರತ ಮತ್ತು ಇತರ ದೇಶಗಳಿಗೆ ನಮ್ಮ ಕಲ್ಲಿದ್ದಲನ್ನು ಭಾರಿ ಪ್ರಮಾಣದಲ್ಲಿ ರಫ್ತು ಮಾಡಲಿದ್ದೇವೆ’ ಎಂದರು.

‘ನಾವು ಈಗ ಜಗತ್ತಿನ ಎಲ್ಲೆಡೆಗೂ ಕಲ್ಲಿದ್ದಲು ರಫ್ತು ಮಾಡುತ್ತೇವೆ. ನಮ್ಮ ಕಲ್ಲಿದ್ದಲಿನ ಗುಣಮಟ್ಟವು ಬೇರೆ ದೇಶಗಳ ಕಲ್ಲಿದ್ದಲಿನ ಗುಣಮಟ್ಟಕ್ಕಿಂತ ಅತ್ಯುತ್ತಮವಾಗಿರಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.