ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜಕೀಯ ಲಾಭಕ್ಕೆ ಅರ್ಲಿಂಗ್‌ಟನ್ ಪವಿತ್ರ ಭೂಮಿಗೆ ಟ್ರಂಪ್ ಅಗೌರವ: ಕಮಲಾ ಹ್ಯಾರಿಸ್

Published 1 ಸೆಪ್ಟೆಂಬರ್ 2024, 2:45 IST
Last Updated 1 ಸೆಪ್ಟೆಂಬರ್ 2024, 2:45 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ನಿಯಮ ಉಲ್ಲಂಘಿಸಿ ಅರ್ಲಿಂಗ್‌ಟನ್ ರಾಷ್ಟ್ರೀಯ ಸಮಾಧಿಯಲ್ಲಿ ಛಾಯಾಚಿತ್ರಗಳನ್ನು ತೆಗೆಯುವ ಮೂಲಕ ಪವಿತ್ರ ಭೂಮಿಗೆ ಡೊನಾಲ್ಡ್ ಟ್ರಂಪ್ ಅಗೌರವ ತೋರಿದ್ದಾರೆ’ ಎಂದು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಆರೋಪಿಸಿದ್ದಾರೆ.

ಮಾಧ್ಯಮ ವರದಿಯೊಂದನ್ನು ಉಲ್ಲೇಖಿಸಿ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಹ್ಯಾರಿಸ್, ‘ಅರ್ಲಿಂಗ್‌ಟನ್ ರಾಷ್ಟ್ರೀಯ ಸಮಾಧಿಯು ಅಮೆರಿಕದ ವೀರರನ್ನು ಗೌರವಿಸಲು ಇರುವ ಸ್ಥಳವಾಗಿದ್ದು, ರಾಜಕೀಯಕ್ಕೆ ಮೀಸಲಿಟ್ಟ ಸ್ಥಳವಲ್ಲ’ ಎಂದರು.

‘ರಾಜಕೀಯ ಲಾಭಗೋಸ್ಕರ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಪವಿತ್ರ ಭೂಮಿಗೆ ಅಗೌರವ ತೋರಿದ್ದಾರೆ’ ಎಂದು ಹೇಳಿದರು.

ಅರ್ಲಿಂಗ್‌ಟನ್ ರಾಷ್ಟ್ರೀಯ ಸಮಾಧಿಗೆ ಡೊನಾಲ್ಡ್‌ ಟ್ರಂಪ್‌ ಅವರು ಭೇಟಿ ನೀಡಿದ್ದ ಸಂದರ್ಭ ಛಾಯಾಚಿತ್ರಗಳನ್ನು ತೆಗೆದುಕೊಳ್ಳದಂತೆ ಟ್ರಂಪ್ ಅವರ ಪ್ರಚಾರ ಸಹಾಯಕರಿಗೆ ಎಚ್ಚರಿಕೆ ನೀಡಲಾಗಿತ್ತು. ನಿಯಮದ ಉಲ್ಲಂಘಿಸಿ ಸಮಾಧಿಯ ಫೋಟೊ ಮತ್ತು ಛಾಯಾಚಿತ್ರಗಳನ್ನು ತೆಗೆದುಕೊಳ್ಳಲು ಮುಂದಾಗಿರುವುದೇ ವಾಗ್ವಾದಕ್ಕೆ ಕಾರಣವಾಗಿದೆ ಎಂದು ರಾಷ್ಟ್ರೀಯ ಸಮಾಧಿಯ ಅಧಿಕಾರಿಗಳು ತಿಳಿಸಿದ್ದಾರೆ.

ಅರ್ಲಿಂಗ್‌ಟನ್ ರಾಷ್ಟ್ರೀಯ ಸಮಾಧಿ ಸ್ಥಳವನ್ನು 1864ರಲ್ಲಿ ಅಮೆರಿಕ ಸರ್ಕಾರ ರಾಷ್ಟ್ರೀಯ ಮಿಲಿಟರಿ ವ್ಯಾಪ್ತಿಗೆ ವರ್ಗಾಯಿಸಿದೆ. ಸುಮಾರು 1,200 ಎಕರೆ ವ್ಯಾಪ್ತಿ ಹೊಂದಿರುವ ಈ ಸ್ಥಳವು ರಾಷ್ಟ್ರಾಧ್ಯಕ್ಷರು, ಯುದ್ಧದಲ್ಲಿ ಮಡಿದ ವೀರಯೋಧರು ಮತ್ತು ಅವರ ಕುಟುಂಬವರ್ಗದವರಿಗಾಗಿ ಮೀಸಲಿಟ್ಟಿರುವ ಸ್ಥಳವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT