ನುವುಕ್ (ಗ್ರೀನ್ಲ್ಯಾಂಡ್)(ಎಪಿ): ‘ಗ್ರೀನ್ಲ್ಯಾಂಡ್ ವಶಕ್ಕೆ ಪಡೆಯಲು ಅಮೆರಿಕಕ್ಕೆ ನ್ಯಾಟೊ(ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ–ಮಿಲಿಟರಿ ಮೈತ್ರಿಕೂಟ) ಸಹಕರಿಸಬೇಕು. ಅಮೆರಿಕದ ನಿಯಂತ್ರಣದಲ್ಲಿ ಯಾವುದೂ ಇಲ್ಲ ಎನ್ನುವುದನ್ನು ಒಪ್ಪಲಾಗದು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ.

ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಡೆನ್ಮಾರ್ಕ್ ಮತ್ತು ಗ್ರೀನ್ಲ್ಯಾಂಡ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವುದಕ್ಕೂ ಮುನ್ನ ಟ್ರಂಪ್ ಅವರ ಈ ಹೇಳಿಕೆ ಹೊರಬಿದ್ದಿದೆ.

ತಮ್ಮದೇ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ‘ರಾಷ್ಟ್ರೀಯ ಸುರಕ್ಷತೆಯ ಉದ್ದೇಶ’ದಿಂದ ಗ್ರೀನ್ಲ್ಯಾಂಡ್ ಅನ್ನು ಬಯಸುತ್ತಿದ್ದೇವೆ ‘ಅದನ್ನು ಪಡೆಯಲು ನ್ಯಾಟೊ ದಾರಿ ಮಾಡಿಕೊಡದಿದ್ದರೆ ರಷ್ಯಾ ಅಥವಾ ಚೀನಾ ಪಡೆದುಕೊಳ್ಳುತ್ತವೆ. ಅದಕ್ಕೆ ಆಸ್ಪದ ನೀಡುವುದಿಲ್ಲ’ ಎಂದು ಪುನರುಚ್ಚರಿಸಿದ್ದಾರೆ.

ಬಲಪ್ರಯೋಗದಿಂದ ಆರ್ಕ್ಟಿಕ್ ದ್ವೀಪವನ್ನು ತನ್ನ ತೆಕ್ಕೆಗೆ ತಗೆದುಕೊಳ್ಳುವುದನ್ನೂ ಅಮೆರಿಕ ತಳ್ಳಿಹಾಕಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.