ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾಗತಿಕವಾಗಿ ವಿಧಿಸಿದ್ದ ಸುಂಕ ಕಾನೂನುಬಾಹಿರ ಎಂದು ಹೇಳಿ ಸುಪ್ರೀಂ ಕೋರ್ಟ್ ಅದನ್ನು ರದ್ದುಪಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಟ್ರಂಪ್ ಹೊಸ ಬೆದರಿಕೆ ಹಾಕಿದ್ದಾರೆ.

ಈ ವಿಚಾರ ಇಟ್ಟುಕೊಂಡು ಯಾರಾದರೂ ಒಪ್ಪಂದಗಳ ವಿಚಾರದಲ್ಲಿ ಆಟವಾಡಲು ಶುರು ಮಾಡಿದರೆ ಭಾರಿ ಪ್ರಮಾಣದ ಮತ್ತು ಅತ್ಯಂತ ಕೆಟ್ಟದಾದ ಸುಂಕ ಎದುರಿಸಬೇಕಾಗುತ್ತದೆ ಎಂದಿದ್ದಾರೆ.

ಶುಕ್ರವಾರ, ಈ ಬಗ್ಗೆ 6–3ರ ಬಹುಮತದ ತೀರ್ಪು ನೀಡಿದ್ದ ಅಮೆರಿಕ ಸುಪ್ರೀಂ ಕೋರ್ಟ್, ಅಧ್ಯಕ್ಷರು ತಮ್ಮ ಕಾನೂನು ಅಧಿಕಾರವನ್ನು ಮೀರಿದ್ದಾರೆ. ಅಮೆರಿಕ ಕಾಂಗ್ರೆಸ್ ಅನುಮೋದನೆ ಪಡೆಯದೇ ಸುಂಕ ಜಾರಿ ತಪ್ಪು ಎಂದು ಹೇಳಿತ್ತು. ತೀರ್ಪಿನ ಕೆಲವು ಗಂಟೆಗಳ ನಂತರ, ಟ್ರಂಪ್ ವಿದೇಶಿ ಸರಕುಗಳ ಮೇಲೆ ಶೇ10 ರಷ್ಟು ಜಾಗತಿಕ ಸುಂಕವನ್ನು ವಿಧಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದರು, ಬಳಿಕ, ಅದನ್ನು 15ಕ್ಕೆ ಏರಿಸಿದ್ದರು.

ಆ ನಂತರ, ಐರೋಪ್ಯ ಒಕ್ಕೂಟ, ಬ್ರಿಟನ್ನಂತಹ ಜಾಗತಿಕ ಮಿತ್ರರಾಷ್ಟ್ರಗಳು ಅಮೆರಿಕ ಜೊತೆಗಿನ ವ್ಯಾಪಾರ ಒಪ್ಪಂದಗಳ ಮರುಪರಾಮರ್ಶೆಗೆ ಮುಂದಾಗಿವೆ ಎಂಬ ವರದಿಗಳ ಬೆನ್ನಲ್ಲೇ ಟ್ರಂಪ್ ಈ ಬೆದರಿಕೆ ಹಾಕಿದ್ದಾರೆ. ಭಾರತವೂ ಸಹ ಮಧ್ಯಂತರ ವ್ಯಾಪಾರ ಒಪ್ಪಂದದ ಕುರಿತಾದ ಮಾತುಕತೆಗೆ ನಿಗದಿಯಾಗಿದ್ದ ಸಭೆಯನ್ನು ಮುಂದೂಡಿತ್ತು.

ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರುತ್ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ‘ಇತ್ತೀಚಿನ ಹಾಸ್ಯಾಸ್ಪದ ಸುಪ್ರೀಂ ಕೋರ್ಟ್ ತೀರ್ಪನ್ನು ಇಟ್ಟುಕೊಂಡು ಆಟವಾಡಲು ಬಯಸುವ ಯಾವುದೇ ದೇಶ, ವಿಶೇಷವಾಗಿ ಅಮೆರಿಕದ ಮೇಲೆ ಹಲವು ವರ್ಷಗಳ ಕಾಲ ಅಥವಾ ದಶಕಗಳಿಂದ ಸುಂಕ ಹೇರಿ ಲಾಭ ಮಾಡಿಕೊಂಡ ದೇಶಗಳು ಇತ್ತೀಚೆಗೆ ಒಪ್ಪಿಕೊಂಡಿದ್ದಕ್ಕಿಂತ ಹೆಚ್ಚಿನ ಸುಂ ಮತ್ತು ಕೆಟ್ಟ ಪ್ರಮಾಣದ ಸುಂಕ ಎದುರಿಸಬೇಕಾಗುತ್ತದೆ. ಖರೀದಿದಾರರೇ ಎಚ್ಚರ!!!’ಎಂದಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತುರ್ತು ಸಂದರ್ಭಗಳಲ್ಲಿ ಬಳಸಬಹುದಾದ 1977ರ ಕಾನೂನಾದ ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ(ಐಇಇಪಿಎ) ಬಳಸಿಕೊಂಡು ಬಹುತೇಕ ಎಲ್ಲಾ ವ್ಯಾಪಾರ ಪಾಲುದಾರ ದೇಶಗಳಿಂದ ಆಮದು ಮಾಡಿಕೊಳ್ಳಲಾಗಿವ ಸರಕುಗಳ ಮೇಲೆ ಅಮೆರಿಕ ಕಾಂಗ್ರೆಸ್ ಅನುಮೋದನೆ ಪಡೆಯದೆ ತೆರಿಗೆ ವಿಧಿಸಿದ್ದರು.

ಕೆನಡಾದಿಂದ ಭಾರತದವರೆಗೆ ಎಲ್ಲ ಮಿತ್ರರಾಷ್ಟ್ರಗಳ ಮೇಲೆ ಸುಂಕ ವಿಧಿಸಲಾಗಿತ್ತು. ಇತ್ತೀಚಿನವರೆಗೂ ಭಾರತವು ಶೇ 50 ರಷ್ಟು ಸುಂಕವನ್ನು ಎದುರಿಸುತ್ತಿತ್ತು. ಭಾರತದ ಜೊತೆ ವ್ಯಾಪಾರ ಒಪ್ಪಂದ ಕುದುರಿದ ಬಳಿಕ

ಸುಂಕವನ್ನು ಶೇ18ಕ್ಕೆ ಇಳಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.