ವಾಷಿಂಗ್ಟನ್: ಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲು ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ವಾಷಿಂಗ್ಟನ್ ತಲುಪಿದರು. ಇದರ ಬೆನ್ನಲ್ಲೇ, ಅವರ ಬೆಂಬಲಿಗರು ಸಂಭ್ರಮಾಚರಣೆಗೆ ಅಣಿಯಾಗಿದ್ದಾರೆ.

ಶನಿವಾರ ವರ್ಜಿನಿಯಾದಲ್ಲಿ ಟ್ರಂಪ್, ತಮ್ಮ ಮಾಲೀಕತ್ವದ ಗಾಲ್ಫ್ ಕ್ಲಬ್ನಲ್ಲಿ ಅದ್ಧೂರಿ ಔತಣಕೂಟ ಆಯೋಜಿಸಿದ್ದರು. ಸುಡುಮದ್ದುಗಳ ಪ್ರದರ್ಶನ ನಡೆಯಿತು. ಉಪಾಧ್ಯಕ್ಷರಾಗಿ ಚುನಾಯಿತರಾಗಿರುವ ಜೆ.ಡಿ ವ್ಯಾನ್ಸ್ ಕೂಡಾ ಭಾಗಿಯಾಗಿದ್ದರು.

ಹಸ್ತಾಂತರ ಸುಗಮ: 4 ವರ್ಷದ ಹಿಂದೆ ನಡೆದ ಪರಾಭವಗೊಂಡಿದ್ದ ಟ್ರಂಪ್ ಅಧಿಕಾರ ಹಸ್ತಾಂತರಿಸಲು ವಿಳಂಬ ಮಾಡಿದ್ದರು. ನಂತರ ಜೋ ಬೈಡನ್ ಅಧಿಕಾರ ಸ್ವೀಕರಿಸುವ ವೇಳೆ ಸಂಪ್ರದಾಯ ಮುರಿದು ಗೈರಾಗಿದ್ದರು.

ಆದರೆ, ಟ್ರಂಪ್ ಸ್ವಾಗತಿಸಲು ಬೈಡನ್ ಸಿದ್ಧತೆ ನಡೆಸಿದ್ದಾರೆ. ಶ್ವೇತಭವನದಲ್ಲಿ ಪ್ರಮಾಣವಚನ ಸಮಾರಂಭದಲ್ಲಿ ಬೈಡನ್ ಭಾಗವಹಿಸುವರು ಎಂದು ಮೂಲಗಳು ತಿಳಿಸಿವೆ. ಟ್ರಂಪ್ ಅವರು ಎರಡನೇ ಬಾರಿಗೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಅದ್ಧೂರಿ ಸಮಾರಂಭ: ಟ್ರಂಪ್ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆ ನಡೆದಿವೆ. ಸಂಗೀತ ಕ್ಷೇತ್ರದ ಹಲವು ಪ್ರಮುಖರು ಕಾರ್ಯಕ್ರಮ ನೀಡುವರು. ನಟ ಜೊನಾಥನ್ ವಿನ್ಸೆಂಟ್, ಕುಸ್ತಿಪಟು ಹಲ್ಕ್ ಹೊಗಾನ್, ಉದ್ಯಮ ಕ್ಷೇತ್ರದ ದಿಗ್ಗಜರಾದ ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್, ಅಮೆಜಾನ್ ಸಂಸ್ಥೆಯ ಸಂಸ್ಥಾಪಕ ಜೆಫ್ ಬೆಜೊಸ್, ಮೆಟಾ ಸಂಸ್ಥೆಯ ಸಿಇಒ ಮಾರ್ಕ್ ಜುಕೆರ್ಬರ್ಗ್, ಟಿಕ್ ಟಾಕ್ ಸಿಇಒ ಶೌ ಝಿ ಚ್ಯು ಭಾಗವಹಿಸಲಿದ್ದಾರೆ. ವಿವಿಧ ದೇಶಗಳ ಅಧ್ಯಕ್ಷರು ಪಾಲ್ಗೊಳ್ಳುವ ಸಂಭವವಿದೆ.

ಜ. 20ರಂದು ಸ್ಥಳೀಯ ಕಾಲಮಾನ ಮಧ್ಯಾಹ್ನ 12.30ಕ್ಕೆ ಪ್ರಮಾಣವಚನ ಕಾರ್ಯಕ್ರಮ ಅಮೆರಿಕದ ಸಂಸತ್ ಭವನದಲ್ಲಿ ನಡೆಯಲಿದೆ. ಆಯ್ದ ಪ್ರಮುಖರಿಗಷ್ಟೇ ಭಾಗವಹಿಸಲು ಅವಕಾಶ ಲಭಿಸುವ ನಿರೀಕ್ಷೆಯಿದೆ. ನಂತರ, ನಿರ್ಗಮಿತ ಅಧ್ಯಕ್ಷ ಬೈಡನ್ ದಂಪತಿ ಶ್ವೇತಭವನದಲ್ಲಿ ಆಯೋಜಿಸುವ ಚಹಾ ಕೂಟದಲ್ಲಿ ಟ್ರಂಪ್ ಭಾಗಿಯಾಗುವರು.

ಒಹಿಯೊ ಗವರ್ನರ್ ಸ್ಥಾನದ ಮೇಲೆ ವಿವೇಕ್ ಕಣ್ಣು?

ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಆಪ್ತರಾದ ಭಾರತ ಮೂಲದ ವಿವೇಕ್ ರಾಮಸ್ವಾಮಿ ಅವರು ಒಹಿಯೊ ಗವರ್ನರ್ ಹುದ್ದೆಗೇರಲು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮವು ವರದಿ ಮಾಡಿದೆ. ಆಪ್ತರ ಹೇಳಿಕೆ ಆಧರಿಸಿ ಅವರು 39 ವರ್ಷದ ವಿವೇಕ್ ಗವರ್ನರ್ ಸ್ದಾನದ ಆಕಾಂಕ್ಷಿ ಎಂದು ‘ವಾಷಿಂಗ್ಟನ್ ಫೋಸ್ಟ್’ ಪತ್ರಿಕೆ ವರದಿ ಮಾಡಿದೆ. ನಂತರ ಟೆಸ್ಲಾ ಮಾಲೀಕ ಇಲಾನ್ ಮಸ್ಕ್ ಮತ್ತು ವಿವೇಕ್ ರಾಮಸ್ವಾಮಿ ಅವರನ್ನು ಅಮೆರಿಕ ಸರ್ಕಾರದ ಕಾರ್ಯದಕ್ಷತಾ ಇಲಾಖೆಯ (ಡಿಒಜಿಇ) ಉಸ್ತುವಾರಿಯಾಗಿ ಚುನಾಯಿತ ಅಧ್ಯಕ್ಷ ಟ್ರಂಪ್ ಘೋಷಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.