ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಜಿಯಾ ಚುನಾವಣೆಯಲ್ಲಿ ಅಕ್ರಮ: ಆರೋಪ ಎದುರಿಸಲು ಶರಣಾಗಲು ಸಿದ್ಧ ಎಂದ ಟ್ರಂಪ್‌

Published 22 ಆಗಸ್ಟ್ 2023, 2:51 IST
Last Updated 22 ಆಗಸ್ಟ್ 2023, 2:51 IST
ಅಕ್ಷರ ಗಾತ್ರ

ವಾಷಿಂಗ್ಟನ್‌: 2020 ರ ಜಾರ್ಜಿಯಾ ಚುನಾವಣಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಮಾಡಲಾಗುತ್ತಿರುವ ಆರೋಪಗಳನ್ನು ಎದುರಿಸಲು ಗುರುವಾರ ಜಾರ್ಜಿಯಾ ಅಧಿಕಾರಿಗಳಿಗೆ ಶರಣಾಗುವುದಾಗಿ ಅಮೆರಿಕ ಮಾಜಿ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

‘ನಿಮಗೆ ನಂಬಲು ಸಾಧ್ಯವೇ? ಬಂಧನಕ್ಕೊಳಗಾಗಲು ನಾನು ಗುರುವಾರದಂದು ಜಾರ್ಜಿಯಾದ ಅಟ್ಲಾಂಟಾಕ್ಕೆ ಹೋಗುತ್ತೇನೆ’ ಎಂದು ಟ್ರಂಪ್‌ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. 

ಟ್ರಂಪ್ ಶರಣಾದಾಗ ಮುಖ್ಯ ಕೌಂಟಿ ಜೈಲಿನ ಸುತ್ತಮುತ್ತಲಿನ ಪ್ರದೇಶದ ಕಠಿಣ ಲಾಕ್ಡೌನ್ ಇರಲಿದೆ ಎಂದು ಫುಲ್ಟನ್ ಕೌಂಟಿ ಶೆರಿಫ್ ಕಚೇರಿ ಸೋಮವಾರ ಸುದ್ದಿ ಪ್ರಕಟಣೆಯಲ್ಲಿ ತಿಳಿಸಿದೆ. 

ಅಕ್ರಮಕ್ಕೆ ಸಂಬಂಧಿಸಿದಂತೆ  ನ್ಯಾಯಾಲಯದಿಂದ ಟ್ರಂಪ್ ಅವರಿಗೆ 200,000 ಡಾಲರ್‌ ಬಾಂಡ್ ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ.

ಜಾರ್ಜಿಯಾದಲ್ಲಿ 2020 ರ ಚುನಾವಣಾ ಫಲಿತಾಂಶಗಳನ್ನು ಬುಡಮೇಲು ಮಾಡುವ ಸಂಚು ರೂಪಿಸಿದ್ದರು ಎಂದು  ಟ್ರಂಪ್ ಸೇರಿ 18 ಜನರ ಮೇಲೆ ಮೇಲೆ ಆರೋಪ ಹೊರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT