ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್‌–ಹಕೀಮ್ ಮಸೀದಿಗೆ ಮೋದಿ ಭೇಟಿ: ಭಾರತೀಯ ಯೋಧರ ಬಲಿದಾನ ಸ್ಮರಣೆ

Published 25 ಜೂನ್ 2023, 23:18 IST
Last Updated 25 ಜೂನ್ 2023, 23:18 IST
ಅಕ್ಷರ ಗಾತ್ರ

ಕೈರೊ (ಈಜಿಪ್ಟ್‌: ಈಜಿಪ್ಟ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕೈರೊದಲ್ಲಿರುವ ‘ಹೀಲಿಯೊಪೊಲಿಸ್ ಕಾಮನ್‌ವೆಲ್ತ್ ಯುದ್ಧ ಸ್ಮಾರಕ’ ಹಾಗೂ ನವೀಕರಣಗೊಳಿಸಲಾಗಿರುವ 11ನೇ ಶತಮಾನದ ಅಲ್‌–ಹಕೀಮ್ ಮಸೀದಿಗೆ ಭಾನುವಾರ ಭೇಟಿ ನೀಡಿದರು.

ಈ ಮಸೀದಿಯನ್ನು ಭಾರತದ ದಾವೂದಿ ಬೋಹ್ರಾ ಮುಸ್ಲಿಮರ ನೆರವಿನಿಂದ ನವೀಕರಿಸಲಾಗಿದೆ.

‘ಹೀಲಿಯೊಪೊಲಿಸ್ ಕಾಮನ್‌ವೆಲ್ತ್ ಯುದ್ಧ ಸ್ಮಾರಕ’ದಲ್ಲಿ ಮೊದಲನೇ ವಿಶ್ವಮಹಾಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಯೋಧರ ಸಮಾಧಿಗಳಿವೆ. ಈ ಸಮಾಧಿಗಳಿಗೆ ಪುಷ್ಪಗುಚ್ಛ ಅರ್ಪಿಸಿ, ಗೌರವ ಸಲ್ಲಿಸಿದ ಮೋದಿ ಯೋಧರ ಶೌರ್ಯ, ಬಲಿದಾನ ಸ್ಮರಿಸಿದರು. ನಂತರ ಸಂದರ್ಶಕರ ಪುಸ್ತಕದಲ್ಲಿ ಷರಾ ಬರೆದು, ಸಹಿ ಹಾಕಿದರು.

ಈಜಿಪ್ಟ್‌ ಮತ್ತು ಪಾಲೆಸ್ಟೀನ್‌ನಲ್ಲಿ ನಡೆದ ಯುದ್ಧದಲ್ಲಿ ಪಾಲ್ಗೊಂಡಿದ್ದ 4 ಸಾವಿರದಷ್ಟು ಭಾರತೀಯ ಯೋಧರು ವೀರಮರಣವನ್ನಪ್ಪಿದ್ದರು. ಕಾಮನ್‌ವೆಲ್ತ್‌ ಯುದ್ಧ ಸಮಾಧಿಗಳ ಆಯೋಗ ಇದನ್ನು ನಿರ್ವಹಣೆ ಮಾಡುತ್ತದೆ.

ಮೆಚ್ಚುಗೆ: 1012ನೇ ಇಸ್ವಿಯಲ್ಲಿ ನಿರ್ಮಿಸಲಾದ ಅಲ್‌–ಹಕೀಮ್‌ ಮಸೀದಿಯ ಗೋಡೆಗಳು ಹಾಗೂ ದ್ವಾರಗಳಲ್ಲಿನ ಸೂಕ್ಷ್ಮಕೆತ್ತನೆಗಳ ಬಗ್ಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

13,560 ಚದರ ಮೀಟರ್‌ ಪ್ರದೇಶದಲ್ಲಿ ನಿರ್ಮಿಸಿರುವ ಈ ಬೃಹತ್‌ ಮಸೀದಿ ಕೇಂದ್ರ ಸಭಾಂಗಣದ ವಿಸ್ತೀರ್ಣ 5 ಸಾವಿರ ಚದರ ಮೀ. ಇದೆ. ಇದು ಕೈರೊದಲ್ಲಿರುವ ನಾಲ್ಕನೇ ಅತ್ಯಂತ ಹಳೆಯ ಮಸೀದಿಯೂ ಆಗಿದೆ. 16ನೇ ಶತಮಾನದ ಫಾತಿಮಿದ್‌ ಖಲೀಫರಾದ ಅಲ್‌ ಹಕೀಮ್‌ ಬಿ–ಅಮ್ರ್ ಅಲ್ಲಾಹ ಅವರ ಹೆಸರನ್ನೇ ಈ ಮಸೀದಿಗೆ ಇಡಲಾಗಿದೆ.

‘ಭಾರತದಲ್ಲಿ ನೆಲೆ ನಿಂತಿರುವ ಬೋಹ್ರಾ ಮುಸ್ಲಿಮರು 1970ರ ನಂತರ ಈ ಮಸೀದಿಯನ್ನು ನವೀಕರಿಸಿದ್ದಾರೆ. ಅಂದಿನಿಂದಲೂ ಅವರೇ ಇದರ ನಿರ್ವಹಣೆ ಮಾಡುತ್ತಿದ್ದಾರೆ’ ಎಂದು ಮಸೀದಿ ಆಡಳಿತ ಮಂಡಳಿ ಮೋದಿ ಅವರಿಗೆ ವಿವರಿಸಿತು.

ದಾವೂದಿ ಬೋಹ್ರಾ ಮುಸ್ಲಿಮರು ಮೂಲತಃ ಈಜಿಪ್ಟ್‌ನವರು. ನಂತರ ಯೆಮೆನ್‌ಗೆ ಸ್ಥಳಾಂತರಗೊಂಡ ಅವರು 11ನೇ ಶತಮಾನದಲ್ಲಿ ಭಾರತಕ್ಕೆ ಬಂದು ಗುಜರಾತ್‌ನಲ್ಲಿ ನೆಲೆ ನಿಂತರು.

ಪ್ರಧಾನಿ ನರೇಂದ್ರ ಮೋದಿ ಅವರು ಕೈರೊದಲ್ಲಿರುವ ‘ಹೀಲಿಯೊಪೊಲಿಸ್ ಕಾಮನ್‌ವೆಲ್ತ್ ಯುದ್ಧ ಸ್ಮಾರಕ’ಕ್ಕೆ ಭಾನುವಾರ ಭೇಟಿ ನೀಡಿ ಹುತಾತ್ಮ ಭಾರತೀಯ ಯೋಧರಿಗೆ ಗೌರವ ಸಲ್ಲಿಸಿದರು –ಪಿಟಿಐ ಚಿತ್ರ
ಪ್ರಧಾನಿ ನರೇಂದ್ರ ಮೋದಿ ಅವರು ಕೈರೊದಲ್ಲಿರುವ ‘ಹೀಲಿಯೊಪೊಲಿಸ್ ಕಾಮನ್‌ವೆಲ್ತ್ ಯುದ್ಧ ಸ್ಮಾರಕ’ಕ್ಕೆ ಭಾನುವಾರ ಭೇಟಿ ನೀಡಿ ಹುತಾತ್ಮ ಭಾರತೀಯ ಯೋಧರಿಗೆ ಗೌರವ ಸಲ್ಲಿಸಿದರು –ಪಿಟಿಐ ಚಿತ್ರ
ಕೈರೊದಲ್ಲಿರುವ ಅಲ್‌–ಹಕೀಮ್ ಮಸೀದಿಗೆ ಭಾನುವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಬೋಹ್ರಾ ಮುಸ್ಲಿಮರೊಂದಿಗೆ ಮಾತನಾಡಿದರು –ಪಿಟಿಐ ಚಿತ್ರ
ಕೈರೊದಲ್ಲಿರುವ ಅಲ್‌–ಹಕೀಮ್ ಮಸೀದಿಗೆ ಭಾನುವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಬೋಹ್ರಾ ಮುಸ್ಲಿಮರೊಂದಿಗೆ ಮಾತನಾಡಿದರು –ಪಿಟಿಐ ಚಿತ್ರ
ಪ್ರಧಾನಿ ನರೇಂದ್ರ ಮೋದಿ ಅವರು ಕೈರೊದಲ್ಲಿರುವ ಅಲ್‌–ಹಕೀಮ್ ಮಸೀದಿಗೆ ಭಾನುವಾರ ಭೇಟಿ ನೀಡಿದರು –ಪಿಟಿಐ ಚಿತ್ರ
ಪ್ರಧಾನಿ ನರೇಂದ್ರ ಮೋದಿ ಅವರು ಕೈರೊದಲ್ಲಿರುವ ಅಲ್‌–ಹಕೀಮ್ ಮಸೀದಿಗೆ ಭಾನುವಾರ ಭೇಟಿ ನೀಡಿದರು –ಪಿಟಿಐ ಚಿತ್ರ
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಬೋಹ್ರಾ ಸಮುದಾಯ ಉತ್ತಮ ಬಾಂಧವ್ಯ ಹೊಂದಿದ್ದು ಅವರಿಗೆ ಮಹತ್ವವಾಗಿರುವ ಧಾರ್ಮಿಕ ಸ್ಥಳಕ್ಕೆ ಮೋದಿ ಭೇಟಿ ನೀಡುತ್ತಿರುವುದು ವಿಶೇಷ.
ಅಜಿತ್‌ ಗುಪ್ತೆ ಈಜಿಪ್ಟ್‌ನಲ್ಲಿ ಭಾರತದ ರಾಯಭಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT