ಆ್ಯಮ್ಲೆಂಡ್, ಆಮಸ್ಟರ್‌ಡಾಮ್: ನೆದರ್ಲೆಂಡ್ಸ್‌ನ ಆ್ಯಮ್ಲೆಂಡ್ ದ್ವೀಪದ ಬಳಿ ಅವಘಡಕ್ಕೀಡಾಗಿರುವ ಸರಕು ಸಾಗಣೆ ಹಡಗು ‘ಫ್ರೀಮೆಂಟಲ್ ಹೈವೆ’ಯಲ್ಲಿನ ಬೆಂಕಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ.

ಮೂರು ಸಾವಿರ ಕಾರುಗಳನ್ನು ಹೊತ್ತು ಜರ್ಮನಿಯಿಂದ ಸಿಂಗಪುರಕ್ಕೆ ಸಾಗುತ್ತಿದ್ದ ಹಡಗು ಹೊತ್ತಿ ಉರಿಯಲು ಎಲೆಕ್ಟ್ರಿಕ್ ಕಾರೊಂದರಲ್ಲಿನ ಬೆಂಕಿಯೇ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಡಗಿನಲ್ಲಿ 25 ಎಲೆಕ್ಟ್ರಿಕ್ ಕಾರುಗಳಿದ್ದವೆಂದು ಈ ಮೊದಲು ಹೇಳಲಾಗಿತ್ತು. ಆದರೆ, 489 ಎಲೆಕ್ಟ್ರಿಕ್ ಕಾರುಗಳಿವೆ ಎಂದು ಮೂಲಗಳ ಮಾಹಿತಿ ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಪಿ ವರದಿ ಮಾಡಿದೆ.

ಸ್ಥಳೀಯಾಡಳಿತಗಳ ಜತೆಗೂಡಿ ಹಡಗಿನ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿರುವುದಾಗಿ ಹಡಗು ನಿರ್ವಹಣಾ ಸಂಸ್ಥೆ ‘ಶೂಯಿ ಕಿಸೆನ್ ಕೈಶಾ’ ಪ್ರಕಟಣೆಯಲ್ಲಿ ಹೇಳಿದೆ.

ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣ ಎಂದು ಗುರುತಿಸಲಾಗಿರುವ ವಾಡನ್ ಸಮುದ್ರದ ಆ್ಯಮ್ಲೆಂಡ್ ದ್ವೀಪದಿಂದ 27 ಕಿ. ಮೀ ದೂರದಲ್ಲಿ ನಿಂತಿರುವ ಹಡಗು ಮುಳುಗುವ ಆತಂಕವಿದೆ. ಹಡಗು ಮುಳಗದಂತೆ ಮಾಡಲು ಸ್ಥಳೀಯಾಡಳಿತಗಳು ಶತ ಪ್ರಯತ್ನ ನಡೆಸುತ್ತಿವೆ. ಆದರೆ, ಬೆಂಕಿ ನಂದಿಸುವ ಕಾರ್ಯ ಕಠಿಣವಾಗಿದ್ದು, ಅಪಾಯಕಾರಿಯಾಗಿಯೂ ಪರಿಣಮಿಸಿದೆ. ಈ ಪ್ರದೇಶವು ವಿಶ್ವದ ವಲಸಿಗ ಹಕ್ಕಿಗಳ ಅತಿ ಮುಖ್ಯ ತಾಣ ಎನಿಸಿಕೊಂಡಿದ್ದು, ಹಡಗು ಮುಳುಗಿದರೆ ಎದುರಾಗುವ ಮಾಲಿನ್ಯ ಜೀವ ಸಂಕುಲಕ್ಕೆ ಮಾರಕವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.