ಬ್ಯಾಂಕಾಕ್:ಈಶಾನ್ಯ ಥಾಯ್ಲೆಂಡ್‌ನಲ್ಲಿರುವ ಖೋ ಈ ರಾಷ್ಟ್ರೀಯ ಉದ್ಯಾನದಲ್ಲಿರುವ ಜಲಪಾತಕ್ಕೆ ಜಾರಿ ಬಿದ್ದು 6 ಕಾಡಾನೆಗಳು ಮೃತಪಟ್ಟಿವೆ.

ಶನಿವಾರ ಮುಂಜಾನೆ 3ಗಂಟೆಯ ಹೊತ್ತಿಗೆ ಆನೆಗಳು ಸಹಾಯಕ್ಕಾಗಿ ಕೂಗುತ್ತಿರುವ ಸದ್ದು ಕೇಳಿ ಬಂದಿತ್ತು ಎಂದು ಥಾಯ್ ರಾಷ್ಟ್ರೀಯ ಉದ್ಯಾನಗಳ ವನ್ಯಜೀವಿ ಮತ್ತು ಸಸ್ಯ ಸಂರಕ್ಷಣೆ ವಿಭಾಗ ಹೇಳಿಕೆ ನೀಡಿದೆ.

ಆನೆಗಳು ಘೀಳಿಡುತ್ತಿರುವ ಸದ್ದು ಕೇಳಿ ಸ್ವಲ್ಪ ಹೊತ್ತಾದ ಬಳಿಕ ಹೂ ನರೋಕ್ ಜಲಪಾತದಲ್ಲಿ 6 ಕಾಡಾನೆಗಳ ಮೃತದೇಹ ಪತ್ತೆಯಾಗಿದೆ.

ಮೊದಲು ನೀರಿಗೆ ಬಿದ್ದ ಆನೆಯನ್ನು ರಕ್ಷಿಸಲು ಇನ್ನುಳಿದ ಆನೆಗಳು ಯತ್ನಿಸಿದ್ದವು. ಹೀಗೆ ಪರಸ್ಪರ ಸಹಾಯ ಮಾಡಲು ಹೋಗಿ ಆನೆಗಳು ಜಾರಿ ಬಿದ್ದಿವೆ. ಜಾರಿ ಬಿದ್ದ ಆನೆಗಳಲ್ಲಿ ಎರಡು ಆನೆಗಳನ್ನು ರಕ್ಷಿಸಿದ್ದರೂ ಅವೆರಡೂ ತೀವ್ರ ಬಳಲಿದ್ದವು.

ಆನೆಗಳು ಹೇಗೆ ಜಾರಿ ಬಿದ್ದವು ಎಂಬುದು ತಿಳಿದಿಲ್ಲ. ಆದರೆ ಕಳೆದ ರಾತ್ರಿ ಜೋರು ಮಳೆ ಸುರಿದಿತ್ತು ಎಂದು ಉದ್ಯಾನದ ವಕ್ತಾರ ಸಂಪೋಚ್ ಮನೀರತ್ ಹೇಳಿರುವುದಾಗಿ ಎಎಫ್‌ಪಿ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.