ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಅಮೆರಿಕ ರಾಯಭಾರಿಯಾಗಿ ಎರಿಕ್‌ ಗಾರ್ಸೆಟ್ಟಿ ನೇಮಕ

Last Updated 16 ಮಾರ್ಚ್ 2023, 3:23 IST
ಅಕ್ಷರ ಗಾತ್ರ

ವಾಷಿಂಗ್ಟನ್: ಭಾರತದಲ್ಲಿ ಅಮೆರಿಕ ರಾಯಭಾರಿಯಾಗಿ ಎರಿಕ್‌ ಗಾರ್ಸೆಟ್ಟಿ ನೇಮಕಗೊಂಡಿದ್ದು, ಈ ಬಗ್ಗೆ ಅಧಿಕೃತ ಮಾಹಿತಿ ಪ್ರಕಟವಾಗಬೇಕಿದೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ.

ಎರಿಕ್‌ ಗಾರ್ಸೆಟ್ಟಿ ಅವರ ನಾಮನಿರ್ದೇಶನವನ್ನು ಅಮೆರಿಕದ ಸೆನೆಟ್ 52-42 ಮತಗಳಿಂದ ಅನುಮೋದನೆ ನೀಡಿದೆ.

ಈ ವರ್ಷ ಜನವರಿಯಲ್ಲಿ ಬೈಡನ್‌ ಅವರು ಮತ್ತೊಮ್ಮೆ ಎರಿಕ್‌ ಅವರನ್ನು ರಾಯಭಾರಿ ಹುದ್ದೆಗೆ ನಾಮನಿರ್ದೇಶನ ಮಾಡಿದ್ದರು. ಎರಿಕ್‌ ಅವರ ನಾಮನಿರ್ದೇಶನವನ್ನು ಮತಕ್ಕೆ ಹಾಕಲು ಅಮೆರಿಕ ಸಂಸತ್ತಿನ ವಿದೇಶಾಂಗ ವ್ಯವಹಾರಗಳ ಸಮಿತಿ ಅಧ್ಯಕ್ಷ ಬಾಬ್‌ ಮೆನೆಂಡೆಝ್‌ ಅವರು ಕಳೆದ ಫೆಬ್ರುವರಿ 28ಕ್ಕೆ ದಿನಾಂಕ ನಿಗದಿಪಡಿಸಿದ್ದರು. ಆದರೆ ಇದನ್ನು ಇಲ್ಲಿಯವರೆಗೂ ಮುಂದೂಡಲಾಗಿತ್ತು.

ಆಡಳಿತರೂಢ ಡೆಮಾಕ್ರಾಟಿಕ್‌ ಪಕ್ಷದವರೇ ಎರಿಕ್‌ ಗಾರ್ಸೆಟ್ಟಿ ಅವರ ನಾಮನಿರ್ದೇಶನವನ್ನು ವಿರೋಧಿಸಿದ್ದರು. ಮತಕ್ಕೆ ಹಾಕುವ ಸಂದರ್ಭದಲ್ಲಿ ಕೆಲವರು ಇವರ ವಿರುದ್ಧವಾಗಿ ಮತಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಲಾಸ್‌ ಏಂಜಲೀಸ್‌ನ ಮಾಜಿ ಮೇಯರ್‌ ಎರಿಕ್‌ ಅವರನ್ನು ಭಾರತದ ಅಮೆರಿಕ ರಾಯಭಾರಿಯನ್ನಾಗಿ 2021ರ ಜುಲೈನಲ್ಲಿಯೂ ಅಧ್ಯಕ್ಷ ಜೊ ಬೈಡನ್‌ ನಾಮನಿರ್ದೇಶನ ಮಾಡಿದ್ದರು.

ಎರಿಕ್‌ ಅವರನ್ನು ಈ ಹುದ್ದೆಗೆ ನೇಮಕಾತಿ ಮಾಡಲು ಆಡಳಿತಾರೂಢ ಡೆಮಾಕ್ರೆಟಿಕ್‌ ಪಕ್ಷಕ್ಕೆ ಸಾಕಷ್ಟು ಬೆಂಬಲ ಇರಲಿಲ್ಲ. ಜೊತೆಗೆ, ಎರಿಕ್‌ ಅವರ ಮೇಲೆ ಲೌಂಗಿಕ ದೌರ್ಜನ್ಯದ ಆರೋಪಗಳು ಇರುವ ಕಾರಣ ಅವರ ನಾಮನಿರ್ದೇಶನವನ್ನು ರಿಪಬ್ಲಿಕನ್‌ ಪಕ್ಷ ವಿರೋಧಿಸಿತ್ತು. ಹೀಗಾಗಿ ಈ ನಾಮನಿರ್ದೇಶನವನ್ನು ಅಮೆರಿಕದ ಸಂಸತ್ತಿನಲ್ಲಿ ಮತಕ್ಕೆ ಹಾಕಲಾಗಲಿಲ್ಲ. ಇದರಿಂದಾಗಿ ಎರಿಕ್‌ ಅವರ ನಾಮನಿರ್ದೇಶನಕ್ಕೆ ತಡೆ ನೀಡಲಾಗಿತ್ತು.

ಚೀನಾದ ದಬ್ಬಾಳಿಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಅಮೆರಿಕ, ಭಾರತದೊಂದಿಗೆ ಬಲಿಷ್ಠ ರಕ್ಷಣಾ ಮತ್ತು ಕಾರ್ಯತಂತ್ರ ಆಧಾರಿತ ಪಾಲುದಾರಿಕೆ ಹೊಂದುವ ಅಗತ್ಯವಿದೆ. ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧ ಮತ್ತು ರಾಷ್ಟ್ರೀಯ ಭದ್ರತೆ ಬಲಗೊಳಿಸಲು ಭಾರತಕ್ಕೆ ರಾಯಭಾರಿಯನ್ನು ನೇಮಕ ಮಾಡುವುದು ಅತ್ಯಗತ್ಯ ಎಂದು ಅಮೆರಿಕ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT