ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀವ್‌ನಲ್ಲಿ ಮತ್ತೆ ಸ್ಫೋಟದ ಸದ್ದು: ಉಕ್ರೇನ್‌ನಾದ್ಯಂತ ಏರ್‌ ರೈಡ್ ಅಲರ್ಟ್‌ ಘೋಷಣೆ

ಕೇಂದ್ರ ಉಕ್ರೇನ್‌ನಿಂದ ದಕ್ಷಿಣ ಮೈಕೋಲಿವ್‌ ವಯಲದ ವರೆಗೆ ದಾಳಿಗಳು ನಡೆದಿವೆ
Published 28 ಏಪ್ರಿಲ್ 2023, 3:10 IST
Last Updated 28 ಏಪ್ರಿಲ್ 2023, 3:10 IST
ಅಕ್ಷರ ಗಾತ್ರ

ಕೀವ್‌: ಶುಕ್ರವಾರ ಮುಂಜಾನೆ ಉಕ್ರೇನ್‌ ರಾಜಧಾನಿ ಕೀವ್‌ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ಫೋಟದ ಸದ್ದುಗಳು ಕೇಳಿಸಿವೆ ಎಂದು ಸ್ಥಳೀಯ ವಾಹಿನಿಗಳು ವರದಿ ಮಾಡಿವೆ.

ಮಧ್ಯರಾತ್ರಿಯ ಬಳಿಕ ದಾಳಿ ನಡೆದಿದ್ದು, ದಾಳಿಯ ಗುರಿ ಹಾಗೂ ದಾಳಿಯಿಂದ ಉಂಟಾದ ಹಾನಿ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ. ಇನ್ನು ಈ ದಾಳಿಯ ಬೆನ್ನಲ್ಲೇ, ವೈಮಾನಿಕ ವಿಭಾಗವು ಕಾರ್ಯಾಚರಣೆಗೆ ಇಳಿದಿದೆ ಎಂದು ಸ್ಥಳೀಯ ನಗರಾಡಳಿತ ಹೇಳಿದೆ.

ಕೇಂದ್ರ ಉಕ್ರೇನ್‌ನಿಂದ ದಕ್ಷಿಣ ಮೈಕೋಲಿವ್‌ ವಯಲದ ವರೆಗೆ ದಾಳಿಗಳು ನಡೆದಿವೆ ಎಂದು ವರದಿಗಳು ತಿಳಿಸಿವೆ. ಹೀಗಾಗಿ ದೇಶದಾದ್ಯಂತ ಏರ್‌ ರೈಡ್‌ ಅಲರ್ಟ್ ಘೋಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT