ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

28ನೇ ಬಾರಿಗೆ ಮೌಂಟ್‌ ಎವರೆಸ್ಟ್‌ ಏರಿದ ಕಾಮಿ ರೀಟಾ

Published 23 ಮೇ 2023, 15:23 IST
Last Updated 23 ಮೇ 2023, 15:23 IST
ಅಕ್ಷರ ಗಾತ್ರ

ಕಠ್ಮಂಡು: ನೇಪಾಳದ ಖ್ಯಾತ ಪರ್ವತಾರೋಹಿ ಕಾಮಿ ರೀಟಾ ಶೆರ್ಪಾ(53) ಅವರು 28ನೇ ಬಾರಿಗೆ ಮೌಂಟ್‌ ಎವರೆಸ್ಟ್ ಪರ್ವತ ಏರಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ಮೇ 17ರಂದು ಅವರು 27ನೇ ಬಾರಿಗೆ ಮೌಂಟ್‌ ಎವರೆಸ್ಟ್‌ ಏರಿದ್ದರು.

8,848.86 ಮೀಟರ್‌ ಎತ್ತರದಲ್ಲಿರುವ ಪರ್ವತದ ತುತ್ತತುದಿಗೆ ಮಂಗಳವಾರ 9.20ಕ್ಕೆ ಅವರು ತಲುಪಿದರು ಎಂದು ಸವನ್‌ ಸಮ್ಮಿಟ್‌ ಟ್ರೆಕ್‌ನ ಚಾರಣ ವ್ಯವಸ್ಥಾಪಕ ಛಾಂಗ್‌ ದಾವಾ ಶೇರ್ಪಾ ಅವರು ತಿಳಿಸಿದ್ದಾರೆ.

ಶೆರ್ಪಾ ಮಾರ್ಗದರ್ಶಕ ಪಸಂಗ್‌ ದವಾ ಅವರು ಸೋಮವಾರವಷ್ಟೇ 27ನೇ ಬಾರಿಗೆ ಮೌಂಟ್‌ ಎವರೆಸ್ಟ್‌ ಏರಿ ರೀಟಾ ಅವರ ದಾಖಲೆ ಸರಿಗಟ್ಟಿದ್ದರು. ಅದರ ಮರುದಿನವೇ ರೀಟಾ ಅವರು ನೂತನ ದಾಖಲೆ ನಿರ್ಮಿಸಿದ್ದಾರೆ.

ಪೂರ್ವ ನೇಪಾಳದ ಸೊಲುಕುಂಬು ಜಿಲ್ಲೆಯ ನಿವಾಸಿಯಾಗಿರುವ ಅವರು ರೀಟಾ ಮೊದಲ ಬಾರಿಗೆ 1994ರ ಮೇ 13ರಂದು ಎವರೆಸ್ಟ್‌ ಶಿಖರ ಏರಿದ್ದರು. ಪ್ರಸ್ತುತ ಸೆವೆನ್‌ ಸಮ್ಮಿಟ್‌ ಟ್ರೆಕ್‌ನಲ್ಲಿ ಅವರು ಹಿರಿಯ ಮಾರ್ಗದರ್ಶಕರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT