ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃದ್ಧಾಶ್ರಮದಲ್ಲಿ ಅಗ್ನಿ ದುರಂತ: 6 ಮಂದಿ ಸಾವು

Published 7 ಜುಲೈ 2023, 15:40 IST
Last Updated 7 ಜುಲೈ 2023, 15:40 IST
ಅಕ್ಷರ ಗಾತ್ರ

ಮಿಲಾನ್‌, ಇಟಲಿ (ಎಎಫ್‌ಪಿ): ಇಲ್ಲಿನ ವೃದ್ಧಾಶ್ರಮವೊಂದರಲ್ಲಿ ಅಗ್ನಿ ದುರಂತ ಸಂಭವಿಸಿ ಆರು ಮಂದಿ ಮೃತಪಟ್ಟಿದ್ದಾರೆ. ಇದೇ ವೇಳೆ ವಿಷಾನಿಲ ಸೇವಿಸಿ ಸುಮಾರು 80 ಜನರು ಅಸ್ವಸ್ಥರಾಗಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಇಟಲಿಯ ಮಾಧ್ಯಮವೊಂದು ವರದಿ ಮಾಡಿದೆ.  

ವೃದ್ಧಾಶ್ರಮವು ಮೂರು ಅಂತಸ್ತಿನ ಕಟ್ಟಡವಾಗಿದ್ದು, ದುರಂತ ಸಂಭವಿಸಿದ ವೇಳೆ ಅದರಲ್ಲಿ 167 ಜನರಿದ್ದರು. ಹತ್ತಾರು ಜನರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಬೆಂಕಿ ಹೊತ್ತಿಕೊಂಡ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅಗ್ನಿಶಾಮಕ ದಳ ಟ್ವೀಟ್‌ ಮಾಡಿದೆ.

ಆಸ್ಪತ್ರೆಗೆ ದಾಖಲಾದವರಲ್ಲಿ 14 ಜನರ ಪರಿಸ್ಥಿತಿ ಗಂಭೀರವಾಗಿದೆ ಎಂದು ವರದಿಯಲ್ಲಿ ಮಾಹಿತಿ ನೀಡಲಾಗಿದೆ. 

ಮೃತರಲ್ಲಿ 69 ರಿಂದ 87 ವರ್ಷ ವಯಸ್ಸಿನ ಐವರು ಮಹಿಳೆಯರು ಮತ್ತು 73 ವರ್ಷ ವಯಸ್ಸಿನ ಪುರುಷರೊಬ್ಬರಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT