ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆನ್ಮಾರ್ಕ್‌ನಲ್ಲಿ ಕುರಾನ್ ಮತ್ತು ಇರಾಕ್ ಧ್ವಜಕ್ಕೆ ಬೆಂಕಿ: ಪ್ರತಿಭಟನೆ

Published 22 ಜುಲೈ 2023, 18:23 IST
Last Updated 22 ಜುಲೈ 2023, 18:23 IST
ಅಕ್ಷರ ಗಾತ್ರ

ಬಾಗ್ದಾದ್: ಕೊಪೇನ್‌ಹೇಗ್‌ನಲ್ಲಿರುವ ಇರಾಕ್‌ ರಾಯಭಾರ ಕಚೇರಿ ಮುಂದೆ ಕುರಾನ್ ಮತ್ತು ಇರಾಕ್‌ನ ರಾಷ್ಟ್ರಧ್ವಜವನ್ನು ಸುಟ್ಟುಹಾಕಿದ ಬೆನ್ನಲ್ಲೇ, ಬಾಗ್ದಾದ್‌ನಲ್ಲಿರುವ ಹಸಿರುವಲಯಕ್ಕೆ ಶನಿವಾರ ನೂರಾರು ಪ್ರತಿಭಟನಕಾರರು ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಆದರೆ, ಪ್ರತಿಭಟನಕಾರರನ್ನು ಭದ್ರತಾಪಡೆಗಳು ತಡೆದಿವೆ.

ಹಸಿರುವಲಯಲ್ಲಿ ರಾಯಭಾರ ಕಚೇರಿಗಳು ಮತ್ತು ಇರಾಕ್ ಸರ್ಕಾರದ ಕಚೇರಿಗಳಿವೆ. ಈ ಪ್ರದೇಶವು ಭಾರಿ ಭದ್ರತಾ ವಲಯವಾಗಿದೆ.

ಇರಾಕ್ ಮೂಲದ ಕ್ರಿಶ್ಚಿಯನ್ ಸಲ್ವಾನ್ ಮೊಮಿಕ ಎಂಬಾತ ಸ್ವೀಡನ್‌ನ ಸ್ಟಾಕ್‌ಹೋಂನಲ್ಲಿರುವ ಇರಾಕ್ ರಾಯಭಾರ ಕಚೇರಿ ಎದುರು ಕುರಾನ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದ. ಈ ವಿಷಯ ತಿಳಿದ ಇರಾನ್, ಇರಾಕ್ ಮತ್ತು ಲೆಬನಾನ್ ಸೇರಿದಂತೆ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳು ಶುಕ್ರವಾರ ಪ್ರತಿಭಟನೆ ನಡೆಸಿದ್ದವು.

ಇದರ ಬೆನ್ನಲ್ಲೇ ಹೇಳಿಕೆ ಬಿಡುಗಡೆ ಮಾಡಿರುವ ಇರಾಕ್‌ ವಿದೇಶಾಂಗ ಇಲಾಖೆ, ಘಟನೆಯನ್ನು ಕಟು ಶಬ್ಧಗಳಿಂದ ಖಂಡಿಸಿದೆ. ಈ ಬೆಳವಣಿಗೆ ವಿರುದ್ಧ ವಿಶ್ವ ಸಮುದಾಯ ನಿಲ್ಲಬೇಕಿದೆ ಎಂದು ಹೇಳಿಕೆಯಲ್ಲಿ ಆಗ್ರಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT