ಕಾಬೂಲ್: ಈಶಾನ್ಯ ಅಫ್ಗಾನಿಸ್ತಾನದ ಬ್ಯಾಂಕ್ವೊಂದರ ಸಮೀಪ ಇಂದು (ಮಂಗಳವಾರ) ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಕನಿಷ್ಠ ಐವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಂದುಜ್ ಪ್ರಾಂತ್ಯದ ಕಾಬೂಲ್ ಬ್ಯಾಂಕ್ ಶಾಖೆಯ ಬಳಿ ಬೆಳಿಗ್ಗೆ 8:35ಕ್ಕೆ (ಸ್ಥಳೀಯ ಕಾಲಮಾನ) ಆತ್ಮಹತ್ಯಾ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ಬ್ಯಾಂಕಿನ ಭದ್ರತಾ ಸಿಬ್ಬಂದಿ, ನಾಗರಿಕರು ಹಾಗೂ ತಾಲಿಬಾನ್ ಚಳವಳಿಯ ಸದಸ್ಯರು ಸೇರಿದಂತೆ ಒಟ್ಟು 5 ಮಂದಿ ಸಾವಿಗೀಡಾಗಿದ್ದಾರೆ. 7 ಜನ ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ಪೊಲೀಸ್ ವಕ್ತಾರ ಜುಮ್ಮಾ ಉದ್ದೀನ್ ಖಾಕಸರ್ ಎಂದು ಅವರು ಹೇಳಿದ್ದಾರೆ.

ಈ ದಾಳಿಯ ಹೊಣೆಯನ್ನು ಸದ್ಯಕ್ಕೆ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ.
.ಆತ್ಮಾಹುತಿ ಬಾಂಬ್ ದಾಳಿ: ತಾಲಿಬಾನ್ ಸರ್ಕಾರದ ಸಚಿವ ಸಾವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.