ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಂಡಿನ ದಾಳಿ; ನಾಲ್ವರು ಪಾಕ್ ಸೈನಿಕರ ಸಾವು

Published : 19 ಫೆಬ್ರುವರಿ 2021, 6:26 IST
ಫಾಲೋ ಮಾಡಿ
Comments

ಇಸ್ಲಾಮಾಬಾದ್‌:ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಚೆಕ್‌ಪೋಸ್ಟ್‌ ಮೇಲೆಅಪರಿಚಿತ ಶಸ್ತ್ರಸಜ್ಜಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದು, ಇದರಲ್ಲಿ ನಾಲ್ವರು ಸೈನಿಕರು ಹತರಾಗಿದ್ದಾರೆ.

‘ಕೊಹ್ಲು ಜಿಲ್ಲೆಯ ಕಹಾನ ಪ್ರದೇಶದಲ್ಲಿರುವ ಜಮನ್‌ ಖಾನ್‌ ಚೆಕ್‌ಪೋಸ್ಟ್‌ ಮೇಲೆ ಗುರುವಾರ ಗುಂಡಿನ ದಾಳಿ ನಡೆದಿದೆ. ಇದರಲ್ಲಿ ನಾಲ್ಕು ಸೈನಿಕರು ಮೃತಪಟ್ಟಿದ್ದು, ಸೈನಿಕರೊಬ್ಬರಿಗೆ ಗಾಯಗಳಾಗಿವೆ’ ಎಂದು ಮೂಲಗಳು ಹೇಳಿವೆ.

ಅನಿಲ ಮತ್ತು ಖನಿಜಗಳಿಂದ ಸಂಪದ್ಭರಿತವಾಗಿರುವ ಬಲೂಚಿಸ್ತಾನದಲ್ಲಿ ಸಂಪೂರ್ಣ ಸ್ವಾಯತ್ತತೆಗಾಗಿ ದಶಕದಿಂದೀಚೆಗೆ ಪ್ರತ್ಯೇಕತಾವಾದಿಗಳು ಹೋರಾಡುತ್ತಿದ್ದು, ಅದರ ಒಂದು ಭಾಗವಾಗಿ ಈ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT