ಕೈರೋ: ಗಾಜಾದ ಕೆಫೆಯ ಮೇಲೆ ಇಸ್ರೇಲ್ ಪಡೆಗಳು ವೈಮಾನಿಕ ದಾಳಿ ನಡೆಸಿದ್ದು, ವಿವಿಧೆಡೆ 74 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಜಾ ನಗರದ ಅಲ್-ಬಕಾ ಕೆಫೆಯ ಮೇಲೆ ವೈಮಾನಿಕ ದಾಳಿ ನಡೆಸುವ ವೇಳೆ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಸುಮಾರು 30 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಯಾವುದೇ ಎಚ್ಚರಿಕೆ ನೀಡದೆ, ಇಸ್ರೇಲ್ ಪಡೆಗಳು ದಾಳಿ ನಡೆಸಿದ್ದರಿಂದ ಭೂಕಂಪದ ಅನುಭವವಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಆತಂಕ ವ್ಯಕ್ತಪಡಿಸಿದರು.
.ವಿಧ್ವಂಸಕ ಕೃತ್ಯ ಎಸಗಿದ ಆರೋಪ: ಸಂಸದ ಚಂದ್ರಶೇಖರ್ ಆಜಾದ್ ಬೆಂಬಲಿಗರ ಬಂಧನ.ಆಳ ಅಗಲ | ಜಿಎಸ್ಟಿ: ಎಂಟು ವರ್ಷಗಳ ಏರಿಳಿತದ ಹಾದಿ.
ಗಾಜಾದ ವಿವಿಧೆಡೆ ದಾಳಿ ನಡೆದಿದ್ದು, 44 ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ದಾಳಿಯ ಭೀಕರತೆಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ರಕ್ತಸಿಕ್ತ ಮೃತದೇಹಗಳು ಬಿದ್ದಿರುವುದು, ಗಾಯಾಳುಗಳ ಚಿರಾಟದ ದೃಶ್ಯಗಳು ವಿಡಿಯೊದಲ್ಲಿದೆ.

‘ಅವರು ನಮ್ಮ ಮೇಲೆ ಮನಬಂದಂತೆ ಗುಂಡು ಹಾರಿಸಿದರು. ನನ್ನ ಕಾಲಿಗೆ ಗುಂಡು ಹಾರಿಸಿದರು. ನನ್ನನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಗುಂಡು ಹಾರಿಸಿದರು ಎಂದು ಮತ್ತೊಬ್ಬ ಪ್ರತ್ಯಕ್ಷದರ್ಶಿಯೊಬ್ಬರು ದಾಳಿಯ ಭೀಕರತೆಯನ್ನು ವಿವರಿಸಿದರು.

ಇಸ್ರೇಲ್ ಯುದ್ಧದಲ್ಲಿ 56 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ.
.ಸಾರ್ಕ್’ಗೆ ಪರ್ಯಾಯ ಸಂಸ್ಥೆ ಹುಟ್ಟುಹಾಕಲು ಚೀನಾ, ಪಾಕ್ ಚಿಂತನೆ.ಬೆಂಕಿಗೆ ತುತ್ತಾದ ವಾಣಿಜ್ಯ ಹಡಗು: ಭಾರತೀಯ ಸೇನೆ ನೆರವು.ಭಯೋತ್ಪಾದಕರಿಗೆ ಹೆದರಲ್ಲ: ಪಹಲ್ಗಾಮ್ ಮಾರ್ಗದಲ್ಲಿ ತೆರಳಲಿರುವ ಯಾತ್ರಾರ್ಥಿಗಳು.ಜೂನ್ನಲ್ಲೇ ಕೆಆರ್ಎಸ್ ಡ್ಯಾಂ ಭರ್ತಿ | ಇತಿಹಾಸ ನಿರ್ಮಾಣ: ಸಿಎಂ ಸಿದ್ದರಾಮಯ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.