ಕಂಪಾಲ(ಉಗಾಂಡ): ಮಾನವೀಯ ಬಿಕ್ಕಟ್ಟಿನಿಂದ ಜರ್ಜರಿತವಾಗಿರುವ ಗಾಜಾಕ್ಕೆ ಸೂಕ್ತ ಪರಿಹಾರ ಕ್ರಮವೊಂದರ ಅಗತ್ಯವಿದ್ದು, ಇದು ಯುದ್ಧ ಸಂತ್ರಸ್ತರಿಗೆ ತಕ್ಷಣದ ಪರಿಹಾರ ನೀಡುವಂತಿರಬೇಕು ಎಂದು ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ.
ಉಗಾಂಡದ ಕಂಪಾಲದಲ್ಲಿ ನಡೆದ ಅಲಿಪ್ತ ಚಳವಳಿ ಶೃಂಗಸಭೆಯಲ್ಲಿ ಭಾಗವಹಿಸಿದ ಅವರು, ‘ಗಾಜಾ ಸಂಘರ್ಷದ ಭೀಕರತೆ ನಮಗೀಗ ಅರ್ಥವಾಗುತ್ತಿದೆ. ಇದಕ್ಕೆ ಸೂಕ್ತ ಪರಿಹಾರವೊಂದರ ಅಗತ್ಯವಿದೆ’ ಎಂದು ಹೇಳಿದರು.
‘ಭಯೋತ್ಪಾದನೆ ಮತ್ತು ಒತ್ತೆಯಾಳುಗಳ ಮೂಲಕ ಬೆದರಿಕೆ ಒಡ್ಡುವ ಕ್ರಮಗಳು ಸರಿಯಲ್ಲ ಎಂಬುದನ್ನು ಮೊದಲು ನಾವು ಸ್ಪಷ್ಟಪಡಿಸಬೇಕು. ಅದರಂತೆಯೇ ಅಂತರರಾಷ್ಟ್ರೀಯ ಕಾನೂನುಗಳನ್ನು ಎಲ್ಲ ದೇಶಗಳು ಗೌರವಿಸಬೇಕಾಗಿದೆ’ ಎಂದರು.