ವಾಷಿಂಗ್ಟನ್: ಬುಧವಾರ ಓವಲ್ ಕಚೇರಿಯಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರೊಂದಿಗಿನ ಜಂಟಿ ಸುದ್ದಿಗೋಷ್ಠಿಯ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವರದಿಗಾರರೊಬ್ಬರ ಮೇಲೆ ತೀವ್ರವಾಗಿ ಸಿಡಿಮಿಡಿಗೊಂಡ ಘಟನೆ ನಡೆದಿದೆ.

ಎನ್ಬಿಸಿ ವರದಿಗಾರ, ಕತಾರ್ನಿಂದ ನಿಮಗೆ ಬೋಯಿಂಗ್ 747 ಐಷಾರಾಮಿ ವಿಮಾನ ಕೊಡುಗೆಯಾಗಿ ಸಿಗುತ್ತಿದೆಯಲ್ಲ? ಇದನ್ನು ಸ್ವೀಕರಿಸುತ್ತಿರೋ? ಎಂದು ಕಾಲೆಳೆಯಲು ನೋಡಿದ್ದಾರೆ. ಇದಕ್ಕೆ ತಕ್ಷಣವೇ ಸಿಡಿಮಿಡಿಗೊಂಡ ಟ್ರಂಪ್, ‘ಏನು ಮಾತನಾಡುತ್ತಿದ್ದಿಯಾ ನೀನು, ನಾವು ಇಲ್ಲಿ ದಕ್ಷಿಣ ಆಫ್ರಿಕಾದ ಬಿಳಿ ಬಣ್ಣದ ರೈತರ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಮಾತನಾಡುವಾಗ ಬೇರೆಡೆ ಗಮನ ಸೆಳೆಯಲು ನೋಡುತ್ತಿದ್ದೀಯಾ.. ನಿನಗೆ ಬುದ್ಧಿ ಇದೆಯಾ? ನಿನೊಬ್ಬ ಭಯಾನಕ ವರದಿಗಾರ, ಏನು ತಿಳಿದುಕೊಳ್ಳಬೇಕು ಅದನ್ನೇ ನೀನು ತಿಳಿದುಕೊಂಡಿಲ್ಲ’ ಎಂದು ಬಾಯಿಗೆ ಬಂದ ಹಾಗೆ ಕೂಗಾಡಿದ್ದಾರೆ.

ಇದರಿಂದ ಸುದ್ದಿಗೋಷ್ಠಿ ಕೆಲಕಾಲ ಸ್ಥಬ್ದವಾಗಿತ್ತು ಎಂದು ವರದಿಗಳು ಹೇಳಿವೆ.

ಅಷ್ಟಕ್ಕೇ ಸುಮ್ಮನಾಗದೇ ಟ್ರಂಪ್, ‘ನಿಮ್ಮ ಎನ್ಬಿಸಿ ಚಾನಲ್ ಸಹ ಸರಿ ಇಲ್ಲ. ಅದರ ಮೇಲೆ ತನಿಖೆ ನಡೆಸಬೇಕು. ಸಾಕು ಮೊದಲು ಇಲ್ಲಿಂದ ಎದ್ದು ಹೊರಗೆ ಹೋಗು, ನೀನು ತುಂಬಾ ಅಸಹ್ಯಕರ, ಮತ್ತೆ ಯಾವುದೇ ಪ್ರಶ್ನೆ ಕೇಳಬೇಡ’ ಎಂದು ಅರಚಿದ್ದಾರೆ.

ಇತ್ತೀಚೆಗೆ ಟ್ರಂಪ್ ಕತಾರ್ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ‘ಬೋಯಿಂಗ್ 747 ಐಷಾರಾಮಿ ವಿಮಾನವನ್ನು ಅಮೆರಿಕಕ್ಕೆ ಉಡುಗೊರೆಯಾಗಿ ನೀಡುತ್ತೇವೆ’ ಎಂದು ಕತಾರ್ ರಾಜ ಹೇಳಿದ್ದರು. ಅದಾದ ನಂತರ ಇದಕ್ಕೆ ಅಮೆರಿಕದಲ್ಲಿ ವಿರೋಧ ವ್ಯಕ್ತವಾಗಿತ್ತು. ಆಗ ಟ್ರಂಪ್ ಮಧ್ಯಪ್ರವೇಶಿಸಿ, ವಿಮಾನ ನೀಡುತ್ತಿರುವುದು ನನಗಲ್ಲ, ಅದು ಅಮೆರಿಕ್ ಒನ್ ಏರ್ಫೋರ್ಸ್ಗೆ. ಇದರಲ್ಲೇನು ಹೆಚ್ಚಿಗೆ ವಿಷಯವಿಲ್ಲ ಎಂದು ಹೇಳಿದ್ದರು.

ಇನ್ನೊಂದೆಡೆ ಟ್ರಂಪ್ ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಸಂಘರ್ಷವನ್ನು ವ್ಯಾಪಾರದ ಮೂಲಕ ಇತ್ಯರ್ಥಪಡಿಸಿದೆ ಎಂದು ಇದೇ ಸುದ್ದಿಗೋಷ್ಠಿಯಲ್ಲಿ ಪುನರುಚ್ಚರಿಸಿದ್ದಾರೆ.

ಪಾಕಿಸ್ತಾನ ಮತ್ತು ಭಾರತದ ನಡುವಿನ ಸಂಘರ್ಷವನ್ನು ನಾನು ವ್ಯಾಪಾರದ ಮೂಲಕ ಇತ್ಯರ್ಥಪಡಿಸಿದ್ದೇನೆ ಎಂದು ನಾನು ಭಾವಿಸಿರುವುದಾಗಿ ಟ್ರಂಪ್ ರಾಮಫೋಸಾ ಎದುರು ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.