ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ನ ‘ಘೋಸ್ಟ್ ಆಫ್ ಕೀವ್’ ಮೇಜರ್ ಸ್ಟೆಪನ್ ತಾರಾಬಾಲ್ಕ ಸಾವು

Last Updated 30 ಏಪ್ರಿಲ್ 2022, 9:42 IST
ಅಕ್ಷರ ಗಾತ್ರ

ಕೀವ್: ‘ಘೋಸ್ಟ್ ಆಫ್ ಕೀವ್’ಎಂದೇ ಹೆಸರಾಗಿದ್ದ ಉಕ್ರೇನ್‌ನ ಫೈಟರ್ ಪೈಲಟ್ ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕಳೆದ ತಿಂಗಳು ಯುದ್ಧದಲ್ಲಿ ರಷ್ಯಾದ 40 ವಿಮಾನಗಳನ್ನು ಹೊಡೆದುರುಳಿಸಿದ ನಂತರ ಅವರನ್ನು ಕೊಲ್ಲಲಾಗಿದೆ ಎಂದು ಟೈಮ್ಸ್ ವರದಿ ಮಾಡಿದೆ.

ಸಾವಿನ ಬಳಿಕ ಅವರ ಹೆಸರನ್ನು 29 ವರ್ಷದ ಮೇಜರ್ ಸ್ಟೆಪನ್ ತಾರಾಬಾಲ್ಕ ಎಂದು ಬಹಿರಂಗಪಡಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಮಾರ್ಚ್ 13 ರಂದು ಶತ್ರು ಪಡೆಗಳ ವಿರುದ್ಧ ಹೋರಾಡುತ್ತಿರುವಾಗ ಸ್ಟೆಪನ್ ಚಲಾಯಿಸುತ್ತಿದ್ದ ಮಿಗ್–29ವಿಮಾನವನ್ನು ರಷ್ಯಾ ಪಡೆಗಳು ಹೊಡೆದುರುಳಿಸಿದ್ದು, ಈ ಸಂದರ್ಭ ಅವರ ಸಾವಾಗಿದೆ.

ಯುದ್ಧದ ಮೊದಲ ದಿನದಂದು ರಷ್ಯಾದ 6 ವಿಮಾನಗಳನ್ನು ಹೊಡೆದುರುಳಿಸಿದ ತಾರಾಬಾಲ್ಕ ಅವರನ್ನು ಉಕ್ರೇನ್‌ನ ‘ಗಾರ್ಡಿಯನ್ ಏಂಜೆಲ್’ಎಂದು ಅಲ್ಲಿನ ಸರ್ಕಾರ ಶ್ಲಾಘಿಸಿತ್ತು. ಆ ಸಮಯದಲ್ಲಿ, ಬಹುಶಃ ವಾಯುಪಡೆ ಕಾರ್ಯಾಚರಣೆಯ ರಹಸ್ಯದ ದೃಷ್ಟಿಯಿಂದ ಅವರ ಗುರುತನ್ನು ಬಹಿರಂಗಪಡಿಸಿರಲಿಲ್ಲ. ಬಳಿಕ ಅವರ ಸುತ್ತ ‘ಘೋಸ್ಟ್ ಆಫ್ ಕೀವ್’ಎಂಬ ಕಟ್ಟುಕಥೆಗಳು ಶುರುವಾಗಿದ್ದವು. ಅವರು ನಿಗೂಢ ವ್ಯಕ್ತಿಯಾಗಿಯೇ ಉಳಿದಿದ್ದರು.

ಜನರು ‘ಘೋಸ್ಟ್ ಆಫ್ ಕೀವ್’ಎಂದು ಕರೆಯಲ್ಪಡುವ ಅವರು ಈಗಾಗಲೇ ರಷ್ಯಾದ ಹಲವು ವಿಮಾನಗಳನ್ನು ಹೊಡೆದುರುಳಿಸುವ ಮೂಲಕ ದುಃಸ್ವಪ್ನವಾಗಿ ಕಾಡಿದ್ದಾರೆ ಎಂದು ಉಕ್ರೇನ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT