ಲಂಡನ್: ಅಪರೂಪದ ‘ಗೋಲ್ಕೊಂಡ ಬ್ಲೂ’ ವಜ್ರವನ್ನು ಮೇ 14ರಂದು ಜಿನೀವಾದಲ್ಲಿ ಹರಾಜು ಹಾಕಲಾಗುತ್ತಿದೆ.

ಅಂತರರಾಷ್ಟ್ರೀಯ ಖ್ಯಾತಿಯ ಕ್ರಿಸ್ಟಿ ಸಂಸ್ಥೆಯು ‘ಮ್ಯಾಗ್ನಿಫಿಸಿಯೆಂಟ್ ಜುವೆಲ್ಸ್’ ಹೆಸರಿನಲ್ಲಿ ಆಯೋಜಿಸುತ್ತಿರುವ ಹರಾಜು ಪ್ರಕ್ರಿಯೆಯಲ್ಲಿ, ಐತಿಹಾಸಿಕ ಮಹತ್ವದ ಈ ವಜ್ರವೂ ಇರಲಿದೆ.

‘ಗೋಲ್ಕೊಂಡ ಬ್ಲೂ’ನಂತಹ ಅಪರೂಪದ ಹಾಗೂ ಬೆಲೆಬಾಳುವ ವಜ್ರವು ಜೀವಮಾನದಲ್ಲಿ ಒಂದು ಬಾರಿ ಮಾರಾಟಕ್ಕೆ ಲಭ್ಯವಾಗುತ್ತದೆ’ ಎಂದು ಕ್ರಿಸ್ಟಿ ಸಂಸ್ಥೆಯ ಜುವೆಲರಿ ವಿಭಾಗದ ಅಂತರರಾಷ್ಟ್ರೀಯ ಮುಖ್ಯಸ್ಥ ರಾಹುಲ್ ಕಡಾಕಿಯಾ ಹೇಳಿದ್ದಾರೆ.

23 ಕ್ಯಾರಟ್ನ ಈ ವಜ್ರವು 3.5 ಕೋಟಿ ಡಾಲರ್ನಿಂದ 5 ಕೋಟಿ ಡಾಲರ್ವರೆಗೆ (₹298 ಕೋಟಿಯಿಂದ ₹426 ಕೋಟಿವರೆಗೆ) ಹರಾಜಾಗಬಹುದು ಎಂದು ಅಂದಾಜಿಸಲಾಗಿದೆ.

ಈ ವಜ್ರವು, ಇಂದೋರ್ನ ಹೋಳ್ಕರ್ ರಾಜವಂಶದ ಮಹಾರಾಜ ಯಶವಂತರಾವ್ ಹೋಳ್ಕರ್ ಅವರಿಗೆ ಸೇರಿದ್ದಾಗಿದೆ. ಯಶವಂತರಾವ್ ಹೋಳ್ಕರ್ –ಸಂಯೋಗಿತಾಬಾಯಿ ದೇವಿ ದಂಪತಿ ವೈಭವೋಪೇತ ಜೀವನಶೈಲಿಗೆ ಹೆಸರುವಾಸಿಯಾಗಿದ್ದರು.

ಪಾಶ್ಚಿಮಾತ್ಯ ಕಲೆ, ಆಭರಣಗಳ ಬಗ್ಗೆ ಅಪಾರ ಒಲವು ಹೊಂದಿದ್ದ ಯಶವಂತರಾವ್ ಹೋಳ್ಕರ್, ತಮ್ಮ ಬದುಕಿನ ಬಹುತೇಕ ದಿನಗಳನ್ನು ವಿದೇಶಗಳಲ್ಲಿಯೇ ಕಳೆದಿದ್ದರು.

ಸಂಯೋಗಿತಾಬಾಯಿ ದೇವಿ ಅವರು ‘ಗೋಲ್ಕೊಂಡ ಬ್ಲೂ’ ಹಾಗೂ ‘ಇಂದೋರ್ ಪಿಯರ್ಸ್’ ವಜ್ರಗಳಿಂದ ಮಾಡಿದ್ದ ಹಾರ ಧರಿಸುತ್ತಿದ್ದರು. ಅಮೆರಿಕದ ಪ್ರಸಿದ್ಧ ಚಿನ್ನಾಭರಣ ಸಂಸ್ಥೆ ಹ್ಯಾರಿ ವಿನ್ಸ್ಟನ್ ಈ ‘ಗೋಲ್ಕೊಂಡ ಬ್ಲೂ’ ವಜ್ರವನ್ನು 1947ರಲ್ಲಿ ಖರೀದಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.