ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತದ ಮೊದಲ ‘ಬಾಹ್ಯಾಕಾಶ ಪ್ರವಾಸಿ’ ಗೋಪಿ ಥೋಟಾಕುರ

Published 20 ಮೇ 2024, 0:07 IST
Last Updated 20 ಮೇ 2024, 0:07 IST
ಅಕ್ಷರ ಗಾತ್ರ

ಹ್ಯೂಸ್ಟನ್: ಉದ್ಯಮಿ ಗೋಪಿ ಥೋಟಾಕುರ ಭಾನುವಾರ ಬಾಹ್ಯಾಕಾಶ ಪ್ರವಾಸಕ್ಕೆ ತೆರಳಿದ ಮೊದಲ ಭಾರತೀಯರೆನಿಸಿಕೊಂಡರು.  

ಅಮೆಜಾನ್ ಸಂಸ್ಥಾಪಕ ಜೆಫ್ ಬೆಝೋ ಅವರ ‘ಬ್ಲ್ಯೂ ಆರಿಜಿನ್‌ನ ಎನ್‌ಎಸ್‌–25’ ಬಾಹ್ಯಾಕಾಶ ಯಾನಕ್ಕೆ ಆಯ್ಕೆಯಾದ ಆರು ಸದಸ್ಯರಲ್ಲಿ ಥೋಟಾಕುರ ಅವರೂ ಒಬ್ಬರೆನಿಸಿಕೊಂಡರು. 

‘ಬ್ಲ್ಯೂ ಆರಿಜಿನ್‌ನ ಎನ್‌ಎಸ್‌–25’ರ ಏಳನೇ ಬಾಹ್ಯಾಕಾಶ ವಿಮಾನವನ್ನು ಪಶ್ಚಿಮ ಟೆಕ್ಸಾಸ್‌ನ ಉಡ್ಡಯನ ಪ್ರದೇಶದಿಂದ ಭಾನುವಾರ ಬೆಳಿಗ್ಗೆ ಉಡಾವಣೆ ಮಾಡಲಾಯಿತು ಎಂದು ಕಂಪನಿಯು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದೆ. 

ಭಾರತ ಸೇನೆಯ ವಿಂಗ್‌ ಕಮಾಂಡರ್‌ ಆಗಿದ್ದ ರಾಕೇಶ್ ಶರ್ಮ ಅವರು 1984ರಲ್ಲಿ ಬಾಹ್ಯಾಕಾಶ ಯಾನವನ್ನು ಕೈಗೊಂಡ ಮೊದಲಿಗರೆನಿಸಿಕೊಂಡಿದ್ದರು. ಆದರೆ, ಥೋಟಾಕುರ ಅವರು ಭಾರತದ ಮೊದಲ ‘ಸ್ಪೇಸ್‌ ಟೂರಿಸ್ಟ್‌’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಹಾರ್ಟ್ಸ್‌ಫೀಲ್ಡ್‌–ಜಾಕ್ಸನ್‌ ಅಟ್ಲಾಂಟಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಪ್ರಿಸರ್ವ್ ಲೈಫ್ ಕಾರ್ಪೊರೇಷನ್‌ ಎಂಬ ಕಂಪನಿ ಇದ್ದು, ಗೋಪಿ ಥೋಟಾಕುರ ಅದರ ಸಹ ಸಂಸ್ಥಾಪಕರಾಗಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT