ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್ ಕಾರ್ಯಕ್ರಮದಲ್ಲಿ ಸುರಕ್ಷತಾ ಕ್ರಮ ಉಲ್ಲಂಘನೆ; ಸೋಂಕು ಹರಡುವ ಸಾಧ್ಯತೆ

ಅಮೆರಿಕದ ಆರೋಗ್ಯ ತಜ್ಞರ ಕಳವಳ
Last Updated 30 ಆಗಸ್ಟ್ 2020, 7:15 IST
ಅಕ್ಷರ ಗಾತ್ರ

ವಾಷಿಂಗ್ಟನ್‌ : ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ವಿಧಿಸಿರುವ ಸುರಕ್ಷತಾ ಕ್ರಮಗಳನ್ನುರಿಪಬ್ಲಿಕನ್‌ ಪಕ್ಷದ ಸಮಾವೇಶಗಳಲ್ಲಿ ಕಡೆಗಣಿಸಲಾಗುತ್ತಿದೆ. ಇದರಿಂದ ಸೋಂಕು ವ್ಯಾಪಕವಾಗಿ ಹರಡುವ ಸಾಧ್ಯತೆ ಹೆಚ್ಚಿದೆ ಎಂದುಅಮೆರಿಕದ ಆರೋಗ್ಯ ತಜ್ಞರು ಆಂತಕ ವ್ಯಕ್ತಪಡಿಸಿದ್ದಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರನ್ನು ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿಯಾಗಿ ಅಧಿಕೃತವಾಗಿ ಘೋಷಿಸಿದ ಸಮಾವೇಶದಲ್ಲಿ 1500 ಅತಿಥಿಗಳು ಪಾಲ್ಗೊಂಡಿದ್ದರು.

‘ಸಮಾವೇಶದಲ್ಲಿ ಬಹಳಷ್ಟು ಮಂದಿ ಮಾಸ್ಕ್ ಧರಿಸಿರಲಿಲ್ಲ, ವ್ಯಕ್ತಿಗತ ಅಂತರವನ್ನೂ ಕಾಯ್ದುಕೊಂಡಿರಲಿಲ್ಲ. ಅವರಲ್ಲಿ ಕೆಲವರಿಗಾದರೂ ಕೋವಿಡ್‌ 19 ವೈರಸ್ ಸೋಂಕು ತಗುಲಿರುವ ಸಾಧ್ಯತೆ ಇರುತ್ತದೆ’ ಎಂದು ಜಾರ್ಜ್‌ ವಾಷಿಂಗ್ಟನ್ ವಿಶ್ವವಿದ್ಯಾಲಯದ ತುರ್ತು ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ ವಿಭಾಗದ ಪ್ರಾಧ್ಯಾಪಕ ಡಾ. ಲಿಯೇನಾ ವೆನ್‌ ಕಳವಳ ವ್ಯಕ್ತಪಡಿಸಿದ್ದಾರೆ.

ಟ್ರಂಪ್ ಪಾಲ್ಗೊಂಡ ಈ ಸಮಾವೇಶದಲ್ಲಿ, ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ವಿಧಿಸಿರುವ ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸಲಾಗಿತ್ತು. ಈ ವೇಳೆ ಆರೋಗ್ಯ ಇಲಾಖೆಯವರು, ‘ಮಾಸ್ಕ್ ಧರಿಸುವುದರಿಂದ ವೈರಸ್ ಹರಡುವಿಕೆಯ ವೇಗವನ್ನು ತಡೆಗಟ್ಟಬಹುದು’ ಎಂದು ಸೂಚನೆ ನೀಡಿದ ನಂತರ ಸಮಾವೇಶದಲ್ಲಿದ್ದ ಕೆಲವರು ಮಾಸ್ಕ್ ಧರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT