ಜಕಾರ್ತ: ಮ್ಯಾನ್ಮಾರ್‌ನಲ್ಲಿ ಸೇನಾ ಆಳಿತ ಜಾರಿಯಾಗಿರುವುದನ್ನು ವಿರೋಧಿಸಿ ದೇಶದಾದ್ಯಂತ ಆರೋಗ್ಯ ಕಾರ್ಯಕರ್ತರು ಸೋಮವಾರದಿಂದ ತಾವು ಕೆಲಸ ಮಾಡುವುದಿಲ್ಲ ಎಂದು ಘೋಷಿಸಿ, ಕೆಂಪು ಪಟ್ಟಿ ಧರಿಸಿ ‘ಅಸಹಕಾರ ಚಳವಳಿ‘ ಆರಂಭಿಸಿದ್ದಾರೆ.

ಇಲ್ಲಿನ ಸರ್ಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತರು, ಮಿಲಿಟರಿ ಆಡಳಿತವನ್ನು ವಿರೋಧಿಸಿ ನಡೆಸುತ್ತಿರುವ ಅಸಹಕಾರ ಚಳವಳಿ ಕುರಿತು ಬುಧವಾರ ಈ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

‘ಸೇನಾಡಳಿತದ ಸರ್ವಾಧಿಕಾರದ ವಿರುದ್ಧದ ನಮ್ಮ ಒಗ್ಗಟ್ಟನ್ನು ಜಗತ್ತಿಗೇ ತೋರಿಸುವುದಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಮ್ಯಾನ್ಮಾರ್‌ನಲ್ಲಿ ನಾಗರಿಕ ಸರ್ಕಾರ ಪುನಃ ಅಧಿಕಾರಕ್ಕೆ ಮರಳಬೇಕೆಂದು ಬಯಸುತ್ತೇವೆ‘ ಎಂದು ಯಾಂಗೂನ್ ನಿವಾಸಿ ಡಾ. ಜುನ್ ಐ ಫ್ಯೂ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಮ್ಯಾನ್ಮಾರ್‌ನಲ್ಲಿ ಫೇಸ್‌ಬುಕ್ ನಿರ್ಬಂಧ: ಇಂಟರ್ನೆಟ್ ಕಂಪನಿಗಳಿಗೆ ಸರ್ಕಾರದ ಆದೇಶ

‘ನಾವೇ ಆರಿಸಿದ ಸರ್ಕಾರ ರೂಪಿಸಿದ ಕಾನೂನು ನಿಯಮಗಳನ್ನು ಮಾತ್ರ ಪಾಲಿಸುತ್ತೇವೆಯೇ ಹೊರತು ಮಿಲಿಟರಿ ಸರ್ಕಾರಕ್ಕೆ ಬೆಂಬಲಿಸುವುದಿಲ್ಲ ಎಂದು ತೋರಿಸಲು ಪ್ರತಿಭಟನೆ ನಡೆಸುತ್ತಿದ್ದೇವೆ’ ಎಂದು ಜುನ್ ತಿಳಿಸಿದ್ದಾರೆ.

ಆರೋಗ್ಯ ಕಾರ್ಯಕರ್ತರು ಕೆಂಪು ರಿಬ್ಬನ್‌ಗಳನ್ನು ತಮ್ಮ ವಸ್ತ್ರಗಳಿಗೆ ಸಿಕ್ಕಿಸಿಕೊಂಡು ಅಸಹಕಾರ ಪ್ರತಿಭಟನೆ ನಡೆಸಿದರು. ಕೆಲವು ಕಾರ್ಯಕರ್ತರು ಕೆಂಪುರಿಬ್ಬನ್ ಧರಿಸಿರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಮ್ಯಾನ್ಮಾರ್‌ನಲ್ಲಿ ಕಳೆದ ವರ್ಷದ ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆಂಗ್ ಸಾನ್ ಸೂ ಕಿ ನೇತೃತ್ವತದ ನಾಗರಿಕ ಸರ್ಕಾರವನ್ನು ಉಚ್ಚಾಟಿಸಿ ಸೇನಾಡಳಿತ ಹೇರಲಾಗಿದೆ.

ಇನ್ನಷ್ಟು ಓದು

ಮ್ಯಾನ್ಮಾರ್: ಇಂಟರ್ನೆಟ್ ದೊರೆಯದಿದ್ದರೂ ಜನರು ಸಂವಹನ ನಡೆಸುತ್ತಿರುವುದು ಹೇಗೆ?

ಮ್ಯಾನ್ಮಾರ್ ತುರ್ತು ಪರಿಸ್ಥಿತಿ: ಅಧ್ಯಕ್ಷ ಪಟ್ಟದತ್ತ ಸೇನಾ ಮುಖ್ಯಸ್ಥ?

Explainer: ಏನಾಗುತ್ತಿದೆ ಮ್ಯಾನ್ಮಾರ್‌ನಲ್ಲಿ, ಸೇನಾ ದಂಗೆಗೆ ಕಾರಣವೇನು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.