ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ಹಿಂದೂ ದೇಗುಲದ ದೇಣಿಗೆ ಪೆಟ್ಟಿಗೆ ಹೊತ್ತೊಯ್ದ ದರೋಡೆಕೋರರು!

Published 31 ಅಕ್ಟೋಬರ್ 2023, 11:14 IST
Last Updated 31 ಅಕ್ಟೋಬರ್ 2023, 11:14 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಹಿಂದೂ ದೇವಸ್ಥಾನದ ಮೇಲೆ ದಾಳಿ ನಡೆಸಿರುವ ದರೋಡೆಕೋರರು, ದೇಗುಲದಲ್ಲಿದ್ದ ದೇಣಿಗೆಯ ಪೆಟ್ಟಿಗೆಯನ್ನು ಹೊತ್ತೊಯ್ದಿದ್ದಾರೆ. ಇದು ಅಮೆರಿಕದಲ್ಲಿರುವ ಭಾರತೀಯ ಸಮುದಾಯವನ್ನು ಆತಂಕಗೊಳಿಸಿದೆ. 

ಹರಿ ಓಂ ರಾಧಾ ಕೃಷ್ಣ ದೇವಾಲಯದಲ್ಲಿ ಸೋಮವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಇಲ್ಲಿನ ಪತ್ರಿಕೆಯೊಂದು ವರದಿ ಮಾಡಿದ್ದು, ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ದೇವಸ್ಥಾನದಲ್ಲಿ ಏನೆಲ್ಲಾ ಕಳ್ಳತನವಾಗಿದೆ ಎಂಬ ಕುರಿತು ಪೊಲೀಸರು ಬಹಿರಂಗಪಡಿಸಿಲ್ಲ. ಆದರೆ, ದೇಣಿಗೆ ಪೆಟ್ಟಿಗೆ ಹೊತ್ತೊಯ್ದಿರುವುದನ್ನು ಖಚಿತಪಡಿಸಿದ್ದಾರೆ.

ಈ ಕೃತ್ಯದಲ್ಲಿ ಆರು ಮಂದಿ ಶಂಕಿತರು ಭಾಗಿಯಾಗಿದ್ದು, ಇಬ್ಬರು ದೇವಸ್ಥಾನದ ಒಳಗೆ ನುಗ್ಗಿರುವುದು ವಿಡಿಯೊದಲ್ಲಿ ದಾಖಲಾಗಿದೆ ಎಂದು ವರದಿ ತಿಳಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT