ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಥಿಯೋಪಿಯಾ: ಹಸಿವಿನಿಂದ 700 ಮಂದಿ ಸಾವು

Published 27 ಜೂನ್ 2023, 15:49 IST
Last Updated 27 ಜೂನ್ 2023, 15:49 IST
ಅಕ್ಷರ ಗಾತ್ರ

ನೈರೋಬಿ: ‘ವಿಶ್ವಸಂಸ್ಥೆ ಹಾಗೂ ಅಮೆರಿಕವು ಆಹಾರ ಪೂರೈಕೆಯ ಸಹಾಯವನ್ನು ನಿಲ್ಲಿಸಿದ ಪರಿಣಾಮ ಉತ್ತರ ಇಥಿಯೋಪಿಯಾದ ಟಿಗ್ರೆ ಪ್ರಾಂತ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಕನಿಷ್ಠ 700 ಮಂದಿ ಸಾವಿಗೀಡಾಗಿದ್ದಾರೆ’ ಎಂದು ಸ್ಥಳೀಯ ಅಧಿಕಾರಿಗಳು ಹಾಗೂ ಸಂಶೋಧಕರು ತಿಳಿಸಿದ್ದಾರೆ.‌

ಅಗತ್ಯವಿರುವ ಜನರಿಗೆ ನೀಡಲು ಉದ್ದೇಶಿಸಲಾದ ಗೋಧಿಯು ಕಳ್ಳತನವಾದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಹಾಗೂ ಅಮೆರಿಕವು ಮಾರ್ಚ್‌ ತಿಂಗಳಿನಿಂದಲೇ ಟಿಗ್ರೆ ಪ್ರಾಂತ್ಯಕ್ಕೆ ಆಹಾರ ಪೂರೈಕೆ ಸಹಾಯವನ್ನು ಸ್ಥಗಿತಗೊಳಿಸಿವೆ. ಇಥಿಯೋಪಿಯಾದಲ್ಲೂ ಜೂನ್‌ ತಿಂಗಳಿನಿಂದ ಆಹಾರ ಪೂರೈಕೆಯನ್ನು ನಿಲ್ಲಿಸಲಾಗಿದೆ. ವಿಶ್ವಸಂಸ್ಥೆ ಹಾಗೂ ಅಮೆರಿಕದ ಈ ನಡೆಯಿಂದ ಸುಮಾರು 20 ಮಿಲಿಯನ್‌ (2 ಕೋಟಿ ಜನರು) ಜನರು ಸಂಕಷ್ಟಕ್ಕೀಡಾಗಿದ್ದಾರೆ.

ಮಾರ್ಚ್‌ನಲ್ಲಿ ಆಹಾರ ಸಹಾಯವನ್ನು ನಿಲ್ಲಿಸಿದ ಬಳಿಕ ಮೂರು ಪ್ರಾಂತ್ಯಗಳ ಏಳು ವಲಯಗಳಲ್ಲಿ 728 ಮಂದಿ ಹಸಿವಿಗೆ ಸಂಬಂಧಿಸಿದ ಘಟನೆಗಳಿಂದ ಸಾವಿಗೀಡಾಗಿದ್ದಾರೆ ಎಂದು ಟಿಗ್ರೆಯ ವಿಪತ್ತು ನಿರ್ವಹಣಾ ಆಯೋಗದ ದಾಖಲೆಗಳು ಹೇಳುತ್ತವೆ.

‘ಮೃತಪಟ್ಟವರ ಕುರಿತು ಜಿಲ್ಲಾ ಅಧಿಕಾರಿಗಳು ಕ್ರೋಡೀಕರಿಸಿದ ಸಂಖ್ಯೆ ಆಧರಿಸಿ ಈ ಮಾಹಿತಿ ನೀಡಲಾಗಿದೆ’ ಎಂದು ವಿಪತ್ತು ನಿರ್ವಹಣಾ ಆಯೋಗದ ಮುಖಂಡ ಗೆಬ್ರೆಹಿವೋಟ್‌ ಗೆಬ್ರೆಜಿಯಾಹರ್‌ ವಿವರಿಸಿದ್ದಾರೆ.

‘ಟಿಗ್ರೆಯಲ್ಲಿನ ಪರಿಸ್ಥಿತಿ ಭಯಾನಕವಾಗಿದೆ. ಆಹಾರ ಅಭಾವದಿಂದ ಅಲ್ಲಿ ಅನೇಕ ಸಾವಿಗೀಡಾಗುತ್ತಿದ್ದಾರೆ. ಹಸಿವಿನಿಂದಾಗಿ ಟಿಗ್ರೆಯ ವಾಯುವ್ಯ ವಲಯದಲ್ಲಿ 350 ಮಂದಿ ಮೃತಪಟ್ಟಿರುವ ಸಂಖ್ಯೆಯನ್ನೂ ಈ ಮಾಹಿತಿ ಒಳಗೊಂಡಿದೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT