ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಯಾದಲ್ಲಿ ನಾಪತ್ತೆಯಾದವರ ತನಿಖೆಗೆ ಸ್ವತಂತ್ರ ಸಂಸ್ಥೆ: ವಿಶ್ವಸಂಸ್ಥೆ ಒಪ್ಪಿಗೆ

Published 30 ಜೂನ್ 2023, 13:46 IST
Last Updated 30 ಜೂನ್ 2023, 13:46 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಸಿರಿಯಾ ಸಂಘರ್ಷದ ವೇಳೆ ಕಾಣೆಯಾದ 1 ಲಕ್ಷದ 30 ಸಾವಿರ ಮಂದಿ ಏನಾದರು ಎಂಬುದನ್ನು ಪತ್ತೆಹಚ್ಚಲು ಸ್ವತಂತ್ರ ಸಂಸ್ಥೆಯೊಂದನ್ನು ರಚಿಸಬೇಕೆಂಬ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂಗೀಕರಿಸಿದೆ.

ನಿರ್ಣಯವನ್ನು ಗುರುವಾರ ಅಂಗೀಕರಿಸಲಾಗಿದ್ದು, ನಾಪತ್ತೆಯಾದವರ ಕುಟುಂಬದವರು ಹಾಗೂ ಪ್ರೀತಿ ಪಾತ್ರರು ಸಲ್ಲಿಸಿದ ಅರ್ಜಿಗಳಿಗೆ ಇದು ಮಹತ್ವದ ಪ್ರತಿಕ್ರಿಯೆಯಾಗಿದೆ. 193 ಸದಸ್ಯರನ್ನೊಳಗೊಂಡಿರುವ ಸಾಮಾನ್ಯ ಸಭೆಯಲ್ಲಿ 81 ಮತಗಳು ನಿರ್ಣಯದ ಪರವಾಗಿ ಬಂದಿದ್ದರೆ, 11 ಮತಗಳು ನಿರ್ಣಯಕ್ಕೆ ವಿರುದ್ಧವಾಗಿ ಬಂದಿವೆ. 62 ಸದಸ್ಯರು ಗೈರುಹಾಜರಾಗಿದ್ದರು.

ನಿರ್ಣಯವನ್ನು ವಿರೋಧಿಸಿದ ಸದಸ್ಯರಲ್ಲಿ ಸಿರಿಯಾ ಕೂಡ ಸೇರಿದೆ. ರಷ್ಯಾ, ಚೀನಾ, ಉತ್ತರ ಕೊರಿಯಾ, ವೆನೆಜುಲಾ, ಕ್ಯೂಬಾ ಹಾಗೂ ಇರಾನ್‌ ದೇಶಗಳು ನಿರ್ಣಯಕ್ಕೆ ವಿರುದ್ಧವಾಗಿ ಮತ ಹಾಕಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT