ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ ವಿರುದ್ಧದ ಕರಡು ನಿರ್ಣಯ: ದೂರ ಉಳಿದ ಭಾರತ

Last Updated 15 ನವೆಂಬರ್ 2022, 13:41 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಉಕ್ರೇನ್‌ ಮೇಲೆ ಆಕ್ರಮಣ ನಡೆಸುವ ಮೂಲಕ ಅಂತರರಾಷ್ಟ್ರೀಯ ಕಾನೂನು ಉಲ್ಲಂಘಿಸಿರುವುದಕ್ಕೆ ರಷ್ಯಾವನ್ನು ಹೊಣೆ ಮಾಡುವ ಹಾಗೂ ಯುದ್ಧದಿಂದ ಉಕ್ರೇನ್‌ಗೆ ಆಗಿರುವ ನಷ್ಟ ಹಾಗೂ ಹಾನಿಗೆ ಸೂಕ್ತ ಪರಿಹಾರ ಒದಗಿಸುವಂತೆ ಆ ದೇಶದ ಮೇಲೆ ಒತ್ತಡ ಹೇರುವ ಕರಡು ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಗಿದೆ. ಈ ನಿರ್ಣಯದಿಂದ ಭಾರತವು ದೂರ ಉಳಿದಿದೆ.

ತನ್ನ ವಿರುದ್ಧದ ಆಕ್ರಮಣಕ್ಕೆ ಸೂಕ್ತ ಪರಿಹಾರ ಒದಗಿಸುವ ಹಾಗೂ ಅದನ್ನು ಮುಂದುವರಿಸುವ ಕುರಿತ ಕರಡು ನಿರ್ಣಯವನ್ನು ಉಕ್ರೇನ್‌, ಸೋಮವಾರ ಸಭೆಯ ಮುಂದಿಟ್ಟಿತು. 193 ಸದಸ್ಯ ರಾಷ್ಟ್ರಗಳ ಪೈಕಿ 94 ರಾಷ್ಟ್ರಗಳು ಧ್ವನಿ ಮತದ ಮೂಲಕ ಇದನ್ನು ಅಂಗೀಕರಿಸಿದವು. ಬೆಲಾರಸ್‌, ಚೀನಾ, ಕ್ಯೂಬಾ, ಉತ್ತರ ಕೊರಿಯಾ, ಇರಾನ್‌, ರಷ್ಯಾ ಮತ್ತು ಸಿರಿಯಾ ಸೇರಿದಂತೆ 14 ರಾಷ್ಟ್ರಗಳು ಇದನ್ನು ವಿರೋಧಿಸಿದವು. ಭಾರತ, ಬಾಂಗ್ಲಾದೇಶ, ಭೂತಾನ್‌, ಬ್ರೆಜಿಲ್‌, ಈಜಿಪ್ಟ್‌, ಇಂಡೊನೇಷ್ಯಾ, ಇಸ್ರೇಲ್‌, ನೇಪಾಳ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ಸೇರಿದಂತೆ 73 ರಾಷ್ಟ್ರಗಳು ಕರಡು ನಿರ್ಣಯದಿಂದ ದೂರ ಉಳಿದವು.

‘ರಷ್ಯಾವು ಉಕ್ರೇನ್‌ನಲ್ಲಿನ ಅರ್ಧದಷ್ಟು ವಿದ್ಯುತ್‌ ಕೇಂದ್ರಗಳನ್ನು ಧ್ವಂಸಗೊಳಿಸಿದೆ. ಚಳಿಗಾಲದ ಸಮಯದಲ್ಲಿ ದೇಶದ ಲಕ್ಷಾಂತರ ಮಂದಿ ವಿದ್ಯುತ್‌ ಇಲ್ಲದೆ, ನೀರಿಲ್ಲದೆ ಪರಿತಪಿಸುವಂತೆ ಮಾಡಿದೆ. ಹಲವು ಅಪರಾಧಗಳನ್ನು ಎಸಗಿರುವ ಆ ರಾಷ್ಟ್ರವು ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ’ ಎಂದು ಉಕ್ರೇನ್‌ ರಾಯಭಾರಿ ಸರ್ಗಿ ಕಿಸ್ಲಿತ್ಸ್ಯಾ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT