ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

UNGA

ADVERTISEMENT

ವಿಶ್ವಸಂಸ್ಥೆಯ ಅಧಿವೇಶನ: ಪ್ರಧಾನಿ ಮೋದಿ ಬದಲು ಜೈಶಂಕರ್ ಭಾಷಣ

ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ವಾರ್ಷಿಕ ಅಧಿವೇಶನದ‌ಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುತ್ತಿಲ್ಲ. ವಿಶ್ವಸಂಸ್ಥೆ ಬಿಡುಗಡೆ ಮಾಡಿದ ಭಾಷಣ ಮಾಡುವವರ ಪರಿಷ್ಕೃತ ತಾತ್ಕಾಲಿಕ ಪಟ್ಟಿಯಲ್ಲಿ ಮೋದಿಯವರ ಹೆಸರು ಇಲ್ಲ.
Last Updated 7 ಸೆಪ್ಟೆಂಬರ್ 2024, 2:57 IST
ವಿಶ್ವಸಂಸ್ಥೆಯ ಅಧಿವೇಶನ: ಪ್ರಧಾನಿ ಮೋದಿ ಬದಲು ಜೈಶಂಕರ್ ಭಾಷಣ

ಸೆ. 26ರಂದು ವಿಶ್ವಸಂಸ್ಥೆಯಲ್ಲಿ ಪ್ರಧಾನಿ ಮೋದಿ ಭಾಷಣ

ಪ್ರಧಾನಿ ನರೇಂದ್ರ ಮೋದಿ ಅವರು ಸೆ. 26ರಂದು ನಡೆಯುವ ವಿಶ್ವಸಂಸ್ಥೆಯ ಉನ್ನತ ಮಟ್ಟದ ಸಾಮಾನ್ಯ ಸಭೆ‌ (ಯುಎನ್‌ಜಿಎ) ಉದ್ದೇಶಿಸಿ ಮಾತನಾಡುವ ಸಾಧ್ಯತೆಯಿದೆ. ವಿಶ್ವಸಂಸ್ಥೆ ಪ್ರಕಟಿಸಿದ ‘ರಾಷ್ಟ್ರಗಳ ಮುಖ್ಯಸ್ಥರ’ ಭಾಷಣಕಾರರ ತಾತ್ಕಾಲಿಕ ಪಟ್ಟಿಯಲ್ಲಿ ಮೋದಿ ಹೆಸರು ಕೂಡ ಇದೆ.
Last Updated 16 ಜುಲೈ 2024, 14:46 IST
ಸೆ. 26ರಂದು ವಿಶ್ವಸಂಸ್ಥೆಯಲ್ಲಿ ಪ್ರಧಾನಿ ಮೋದಿ ಭಾಷಣ

UNGA: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕ್‌ಗೆ ಭಾರತ ತರಾಟೆ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಕುರಿತು ಪಾಕಿಸ್ತಾನ ರಾಯಭಾರಿ ನೀಡಿದ ‘ವಿನಾಶಕಾರಿ ಮತ್ತು ಅಪಾಯಕಾರಿ’ ಹೇಳಿಕೆಗೆ ತೀಕ್ಷ್ಣವಾದ ಪ್ರತ್ಯುತ್ತರ ನೀಡಿದ ಭಾರತ, ‘ಪಾಕಿಸ್ತಾನವು ಎಲ್ಲ ವಿಷಯಗಳಲ್ಲೂ ಅಪ್ರಾಮಾಣಿಕವಾಗಿ ನಡೆದುಕೊಂಡಿರುವ ಇತಿಹಾಸ ಹೊಂದಿದೆ’ ಎಂದು ಚಾಟಿ ಬೀಸಿದೆ.
Last Updated 3 ಮೇ 2024, 13:23 IST
UNGA: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕ್‌ಗೆ ಭಾರತ ತರಾಟೆ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಡೆನ್ನಿಸ್ ಫ್ರಾನ್ಸಿಸ್ ನಾಳೆ ಭಾರತಕ್ಕೆ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಡೆನ್ನಿಸ್ ಫ್ರಾನ್ಸಿಸ್ ಅವರು ಜನವರಿ 22 ರಿಂದ 26 ರವರೆಗೆ ಭಾರತಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ
Last Updated 21 ಜನವರಿ 2024, 4:51 IST
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಡೆನ್ನಿಸ್ ಫ್ರಾನ್ಸಿಸ್ ನಾಳೆ ಭಾರತಕ್ಕೆ

ಇಸ್ರೇಲ್, ಪ್ಯಾಲೇಸ್ಟೀನ್‌ನೊಂದಿಗೆ ಭಾರತ ನಿರಂತರ ಸಂಪರ್ಕದಲ್ಲಿದೆ: ಕಾಂಬೋಜ್

ಇಸ್ರೇಲ್‌ ಹಾಗೂ ಪ್ಯಾಲೆಸ್ಟೀನ್‌ ನಾಯಕರೊಂದಿಗೆ ಭಾರತ ನಿರಂತರವಾಗಿ ಸಂಪರ್ಕದಲ್ಲಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿರುವ ರುಚಿರಾ ಕಾಂಬೋಜ್‌ ಮಂಗಳವಾರ ಹೇಳಿದ್ದಾರೆ.
Last Updated 10 ಜನವರಿ 2024, 6:04 IST
ಇಸ್ರೇಲ್, ಪ್ಯಾಲೇಸ್ಟೀನ್‌ನೊಂದಿಗೆ ಭಾರತ ನಿರಂತರ ಸಂಪರ್ಕದಲ್ಲಿದೆ: ಕಾಂಬೋಜ್

ಇಸ್ರೇಲ್‌–ಹಮಾಸ್‌ ಕದನವಿರಾಮ: ವಿಶ್ವಸಂಸ್ಥೆ ನಿರ್ಣಯದ ಪರ ಭಾರತ ಮತ

ಇಸ್ರೇಲ್‌–ಹಮಾಸ್‌ ಸಂಘರ್ಷಕ್ಕೆ ಮಾನವೀಯ ನೆಲೆಯಲ್ಲಿ ತಕ್ಷಣವೇ ಕದನವಿರಾಮ ಘೋಷಣೆ ಹಾಗೂ ಒತ್ತೆಯಾಳುಗಳ ಬೇಷರತ್‌ ಬಿಡುಗಡೆಗೆ ಒತ್ತಾಯಿಸುವ ಸಲುವಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಂಡನೆಯಾದ ಕರಡು ನಿರ್ಣಯದ ಪರ ಭಾರತ ಮತ ಚಲಾಯಿಸಿದೆ.
Last Updated 13 ಡಿಸೆಂಬರ್ 2023, 2:43 IST
ಇಸ್ರೇಲ್‌–ಹಮಾಸ್‌ ಕದನವಿರಾಮ: ವಿಶ್ವಸಂಸ್ಥೆ ನಿರ್ಣಯದ ಪರ ಭಾರತ ಮತ

ರಷ್ಯಾ ವಿರುದ್ಧದ ಕರಡು ನಿರ್ಣಯ: ದೂರ ಉಳಿದ ಭಾರತ

ಉಕ್ರೇನ್‌ ಮೇಲೆ ಆಕ್ರಮಣ ನಡೆಸುವ ಮೂಲಕ ಅಂತರರಾಷ್ಟ್ರೀಯ ಕಾನೂನು ಉಲ್ಲಂಘಿಸಿರುವುದಕ್ಕೆ ರಷ್ಯಾವನ್ನು ಹೊಣೆ ಮಾಡುವ ಹಾಗೂ ಯುದ್ಧದಿಂದ ಉಕ್ರೇನ್‌ಗೆ ಆಗಿರುವ ನಷ್ಟ ಹಾಗೂ ಹಾನಿಗೆ ಸೂಕ್ತ ಪರಿಹಾರ ಒದಗಿಸುವಂತೆ ಆ ದೇಶದ ಮೇಲೆ ಒತ್ತಡ ಹೇರುವ ಕರಡು ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಗಿದೆ. ಈ ನಿರ್ಣಯದಿಂದ ಭಾರತವು ದೂರ ಉಳಿದಿದೆ.
Last Updated 15 ನವೆಂಬರ್ 2022, 13:41 IST
ರಷ್ಯಾ ವಿರುದ್ಧದ ಕರಡು ನಿರ್ಣಯ: ದೂರ ಉಳಿದ ಭಾರತ
ADVERTISEMENT

ರೋಹಿಂಗ್ಯಾಗಳಿಂದ ದೇಶದ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ: ಬಾಂಗ್ಲಾ ಪ್ರಧಾನಿ ಕಳವಳ

ರೋಹಿಂಗ್ಯಾ ನಿರಾಶ್ರಿತರ ದೀರ್ಘಕಾಲದ ಉಪಸ್ಥಿತಿಯಿಂದಾಗಿ ದೇಶದ ಆರ್ಥಿಕತೆ, ಭದ್ರತೆ, ಸಾಮಾಜಿಕ–ರಾಜಕೀಯ ಸ್ಥಿರತೆ ಮತ್ತು ಪರಿಸರದ ಮೇಲೆ ಗಂಭೀರ ಪರಿಣಾಮಗಳು ಉಂಟಾಗುತ್ತಿವೆ ಎಂದು ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 24 ಸೆಪ್ಟೆಂಬರ್ 2022, 2:44 IST
ರೋಹಿಂಗ್ಯಾಗಳಿಂದ ದೇಶದ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ: ಬಾಂಗ್ಲಾ ಪ್ರಧಾನಿ ಕಳವಳ

World Wildlife Day 2022: ವನ್ಯಜೀವಿ ಪ್ರಭೇದಗಳ ರಕ್ಷಣೆಗೆ ಕರೆ

ಜಗತ್ತಿನ ವನ್ಯಜೀವಿಗಳು ಹಾಗೂ ಸಸ್ಯ ಸಂಪತ್ತಿನ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಮಾರ್ಚ್‌ 3ರಂದು 'ವಿಶ್ವ ವನ್ಯಜೀವಿ ದಿನ' ಆಚರಿಸಲಾಗುತ್ತಿದೆ. 2013ರ ಡಿಸೆಂಬರ್‌ 20ರಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯ (ಯುಎನ್‌ಜಿಎ) 68ನೇ ಅಧಿವೇಶನದಲ್ಲಿ ವಿಶ್ವ ವನ್ಯಜೀವಿ ದಿನದ ಆಚರಣೆಯ ಬಗ್ಗೆ ಘೋಷಿಸಲಾಯಿತು.
Last Updated 3 ಮಾರ್ಚ್ 2022, 7:33 IST
World Wildlife Day 2022: ವನ್ಯಜೀವಿ ಪ್ರಭೇದಗಳ ರಕ್ಷಣೆಗೆ ಕರೆ

ಬಾಂಬ್‌, ಬುಲೆಟ್‌ಗಳಿಂದ ಕೋವಿಡ್‌ ತಡೆಗಟ್ಟಲಾಗದು: ಜೋ ಬೈಡನ್‌

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನವನ್ನು ಉದ್ದೇಶಿಸಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಮಂಗಳವಾರ ಮಾಡಿರುವ ಮೊದಲ ಭಾಷಣದಲ್ಲಿ ಎಲ್ಲ ರಾಷ್ಟ್ರಗಳು ಜಾಗತಿಕ ಸಮಸ್ಯೆಗಳ ಕುರಿತು ಪ್ರಸ್ತಾಪಿಸುವಂತೆ ಕರೆ ನೀಡಿದ್ದಾರೆ. ಕೋವಿಡ್‌–19 ಸಾಂಕ್ರಾಮಿ, ಹವಾಮಾನ ವೈಪರೀತ್ಯ ಹಾಗೂ ಮಾನವ ಹಕ್ಕುಗಳ ಕುರಿತು ಮಾತನಾಡುವಂತೆ ಕೇಳಿದ್ದಾರೆ. ಚೀನಾದೊಂದಿಗೆ ಅಮೆರಿಕವು 'ಹೊಸ ಶೀತಲ ಸಮರ' ನಡೆಸಲು ಬಯಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Last Updated 22 ಸೆಪ್ಟೆಂಬರ್ 2021, 2:40 IST
ಬಾಂಬ್‌, ಬುಲೆಟ್‌ಗಳಿಂದ ಕೋವಿಡ್‌ ತಡೆಗಟ್ಟಲಾಗದು: ಜೋ ಬೈಡನ್‌
ADVERTISEMENT
ADVERTISEMENT
ADVERTISEMENT